ನೆಲ್ಲಿಹುದಿಕೇರಿ ನೌಷಾದ್ ಅವರಿಗೆ ಪಿಎಚ್.ಡಿ ಪದವಿ
admincoorgdaily

ಮಡಿಕೇರಿ;ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಾಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ.ಶಹಬರ್ ಪಾಷಾ ಅವರ ಮಾರ್ಗದರ್ಶನದಲ್ಲಿ "politics in kodagu;Trends and issues since 1990 to 2018-A study ಎಂಬ ಮಹಾಪ್ರಬಂಧಕ್ಕೆ ನೆಲ್ಲಿಹುದಿಕೇರಿ ನಿವಾಸಿ ನೌಷಾದ್ ಎಚ್.ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ನಿವಾಸಿ ಹಂಸ ಹಾಗೂ ನಫೀಸ ದಂಪತಿಗಳ ಪುತ್ರನಾಗಿರುವ ಡಾ.ನೌಷಾದ್ ಎಚ್. ಅವರು ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.