ನೆಲ್ಯಹುದಿಕೇರಿ: ಲಕ್ಕಿ ಇಲವನ್ ಪ್ರೀಮಿಯರ್ ಲೀಗ್-2 ಸಮಾರೋಪ: ಝಲ್ಲಾ ಕ್ರಿಕೆಟರ್ಸ್ ಚಾಂಪಿಯನ್

Apr 28, 2026 - 17:20
 0  155
ನೆಲ್ಯಹುದಿಕೇರಿ: ಲಕ್ಕಿ ಇಲವನ್ ಪ್ರೀಮಿಯರ್ ಲೀಗ್-2 ಸಮಾರೋಪ: ಝಲ್ಲಾ ಕ್ರಿಕೆಟರ್ಸ್ ಚಾಂಪಿಯನ್

ಸಿದ್ದಾಪುರ:-ನೆಲ್ಯಹುದಿಕೇರಿ ನಾಲ್ಕನೇ ವಾರ್ಡ್ ವತಿಯಿಂದ ನಾಲಕ್ಕು ದಿನ ಆಯೋಜಿಸಲಾದ ಲಕ್ಕಿ ಇಲವನ್ ಪ್ರೀಮಿಯರ್ ಲೀಗ್-2 ಕ್ರೀಡಾಕೂಟವು ಯಶಸ್ವಿಯಾಗಿ ಸಮಾರೋಪಗೊಂಡಿತು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಝಲ್ಲಾ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಬೌಂಡರಿ ಬ್ಲಾಸ್ಟರ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. 

ವೈಯಕ್ತಿಕ ಪ್ರಶಸ್ತಿಗಳಲ್ಲಿ ಝಲ್ಲಾ ತಂಡದ ನಿಖಿಲ್ ದಾಸ್ ಮ್ಯಾನ್ ಆಫ್ ದ ಸೀರೀಸ್, ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗಳನ್ನು ಪಡೆದು ಗಮನ ಸೆಳೆದರು. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು 46 ತಂಡದ ಮುಬಾರಕ್ ತಮ್ಮದಾಗಿಸಿಕೊಂಡರು.

ಕ್ರೀಡಾಕೂಟದ ಅಂಗವಾಗಿ ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಥ್ರೋ ಬಾಲ್ ಸೇರಿದಂತೆ ವಿವಿಧ ಸ್ಪರ್ಧೆಗಳು ಹಾಗೂ ಮಕ್ಕಳಿಗಾಗಿ ವಿಶೇಷ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇದಲ್ಲದೆ, ಹಿರಿಯರಿಗಾಗಿ ಲೆಜೆಂಡ್ ಕ್ರಿಕೆಟ್ ಲೀಗ್ ಪಂದ್ಯಾವಳಿಯೂ ಆಯೋಜಿಸಲ್ಪಟ್ಟಿದ್ದು.

ಲಕ್ಕಿ ಇಲವನ್ ರೆಡ್ ತಂಡ ಪ್ರಥಮ ಬಹುಮಾನವನ್ನು ಗೆದ್ದಿತು. ಫೈನಲ್ ಪಂದ್ಯದಲ್ಲಿ ಡೊಮಿನೋಸ್ ಸಂಘದ ಶೌಕತ್ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ  ಶಾಸಕ ಡಾ. ಮಂತರ್ ಗೌಡ ಮಾತನಾಡಿ ಗ್ರಾಮ ಜನರನ್ನು ಒಂದಾಗಿ ಸೇರಿಸಿ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು ಕ್ರೀಡಾಕೂಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ ಸಿಪಿಐಎಂ ಶಾಖಾ ಕಾರ್ಯದರ್ಶಿ ಪಿ.ಆರ್. ಭರತ್, ನೆಲ್ಯಹುದಿಕೇರಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮೀ, ಮಾಜಿ ಅಧ್ಯಕ್ಷ ಹಕ್ಕಿಂ, ಮಾಜಿ ಸದಸ್ಯ ಸಪೀಯ, ಸುವೈದ ಅಶ್ರಫ್, ದೇವಸಿ ಟಿ. ಪಿ., ಲಿಂಬ್ರ ಫಾಸಿಲ್, ಕೆ.ಎಂ. ಬಶೀರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮುಸ್ತಫ ಪಿ.ಕೆ., ಡೊಮಿನೋಸ್ ಸಂಘದ ಶೌಕತ್ ಸೇರಿದಂತೆ ಲಕ್ಕಿ ಇಲವನ್ ಸದಸ್ಯರಾದ ನಿಖಿಲ್, ಮುಸ್ತಫ, ರಫೀಕ್, ಅಪ್ಸಲ್, ಉದಯ ಮತ್ತಿತರರು ಹಾಜರಿದ್ದರು. ಕ್ರೀಡಾಭಿಮಾನಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಉತ್ಸಾಹ ತುಂಬಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0