ಸಿದ್ದಾಪುರ ಮತ್ತು ಚೆಟ್ಟಳ್ಳಿ ಪೊಲೀಸ್ ಠಾಣೆಗಳಿಗೆ ನೂತನ ಎಸ್‌ಪಿ ಬಿಂದು ಮಣಿ ಭೇಟಿ
ಮಡಿಕೇರಿ:ಜಿಲ್ಲೆಯ ಸಿದ್ದಾಪುರ ಠಾಣೆ ಮತ್ತು ಚೆಟ್ಟಳ್ಳಿ ಉಪ ಠಾಣೆಗಳಿಗೆ ನೂತನ ಎಸ್‌ಪಿ ಬಿಂದು ಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಠಾಣೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಇದೇ ಸಂದರ್ಭ ಸಿದ್ದಾಪುರ ಠಾಣೆಯ ಪೊಲೀಸ್ ವಸತಿ ಗೃಹಗಳಿಗೂ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.