ಬೆಂಗಳೂರಿನಿಂದ ಕಣ್ಣೂರಿಗೆ ಹೊಸ ಬಸ್ ಸೇವೆ ಆರಂಭ: ವೀರಾಜಪೇಟೆ ಮಾರ್ಗವಾಗಿ ನಾನ್ ಎ.ಸಿ ಸ್ಲೀಪರ್

Aug 6, 2026 - 22:13
 0  1
ಬೆಂಗಳೂರಿನಿಂದ ಕಣ್ಣೂರಿಗೆ ಹೊಸ ಬಸ್ ಸೇವೆ ಆರಂಭ: ವೀರಾಜಪೇಟೆ ಮಾರ್ಗವಾಗಿ ನಾನ್ ಎ.ಸಿ ಸ್ಲೀಪರ್

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಂತಾರಾಜ್ಯ ಮಾರ್ಗದಲ್ಲಿ ಮತ್ತೊಂದು ಹೊಸ ಬಸ್ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ನಾನ್ ಎ.ಸಿ ಸ್ಲೀಪರ್ ಬಸ್ ಸೇವೆ ಆಗಸ್ಟ್ 7 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

 ಕೆಎಸ್ಆರ್‌ಟಿಸಿಯ ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ ಈ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಮಡಿವಾಳದಿಂದ ರಾತ್ರಿ 8.36ಕ್ಕೆ ಬಸ್ ಹೊರಡಲಿದೆ.

 ಮಡಿವಾಳ - ಶಾಂತಿನಗರ - ಮೈಸೂರು ರಸ್ತೆ ಸ್ಯಾಟಲೈಟ್ - ಕೆಂಗೇರಿ - ಮೈಸೂರು - ಹುಣಸೂರು - ಗೋಣಿಕೊಪ್ಪ - ವೀರಾಜಪೇಟೆ - ಇರಿಟ್ಟಿ - ತಲಶ್ಶೇರಿ ಮಾರ್ಗವಾಗಿ ಕಣ್ಣೂರು ತಲುಪಲಿದೆ. ಬಸ್ ಬೆಳಿಗ್ಗೆ 3.30ಕ್ಕೆ ವೀರಾಜಪೇಟೆಗೆ ಆಗಮಿಸಿ, ಬೆಳಿಗ್ಗೆ 6.30ಕ್ಕೆ ಕಣ್ಣೂರು ತಲುಪಲಿದೆ. ಕೊಡಗು ಜಿಲ್ಲೆಯ ವೀರಾಜಪೇಟೆ ಮತ್ತು ಕೇರಳದ ಗಡಿ ಭಾಗಗಳಿಗೆ ಪ್ರಯಾಣಿಸುವ ಸಾರ್ವಜನಿಕರು, ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಈ ಹೊಸ ಬಸ್ ಸೇವೆಯು ಅತ್ಯಂತ ಅನುಕೂಲಕರವಾಗಲಿದೆ ಎಂದು ಕೆಎಸ್ಆರ್‌ಟಿಸಿ ಮೂಲಗಳು ಹೇಳಿವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0