ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ದಸರಾ ಮಹೋತ್ಸವದ ನೂತನ ಸಮಿತಿ ರಚನೆ
admincoorgdaily

ಮಡಿಕೇರಿ ಆ.2 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ 96ನೇ ವರ್ಷದ ದಸರಾ ಮಹೋತ್ಸವದ ನೂತನ ಸಮಿತಿಯನ್ನು ಇಂದು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಚೇತನ್ ಎಂ.ಆರ್., ನವೀನ್ ಯು., ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಹಾಗೂ ಖಜಾಂಚಿಯಾಗಿ ಪವನ್ ಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎ.ಬಿ.ಅನಿಲ್, ಮಧು, ಸೂರಜ್ ಸುಬ್ರಮಣಿ, ಸದಾಶಿವ ಶೆಟ್ಟಿ, ಪುರುಷೋತ್ತಮ್, ರಂಜಿತ್ ಮಾಸ್ಟರ್, ಸಹ ಕಾರ್ಯದರ್ಶಿಯಾಗಿ ನಿತೇಶ್, ಅರವಿಂದ್, ಸಹ ಖಜಾಂಚಿಯಾಗಿ ಕಾರ್ತಿಕ್, ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ ನಾಗರಾಜ್, ಚಲನವಲನ ಅಧ್ಯಕ್ಷರಾಗಿ ದಿನೇಶ್ ನಾಯರ್, ಸಂತೋಷ್, ನಿಖಿಲ್, ಸುರೇಶ್, ಹರೀಶ್, ವಿಜಯ್ ಕರ್ಕೆರ, ದೇವಸ್ಥಾನ ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಸಿ.ಎಸ್.ರಂಜಿತ್ ಕುಮಾರ್, ಟಿ.ಎಸ್.ಪ್ರಕಾಶ್, ಎಂ.ಎಲ್.ಸತೀಶ್, ಮಹಾ ಪೋಷಕರಾಗಿ ಜೇಮ್ಸ್, ದೇಜುಶೆಟ್ಟಿ, ರಾಜು ಎಂ.ಬಿ., ಡಿ.ಪಿ.ದಯಾನಂದ, ಟಿ.ಹೆಚ್.ಉದಯ ಕುಮಾರ್, ಹರೀಶ್ ಕುಮಾರ್ ಪಿ.ಜಿ., ಎಸ್.ಸಿ.ಹರೀಶ್, ಉಮೇಶ್ (ಪೂಜಾರಿ), ಕೆ.ಎಸ್.ರಮೇಶ್, ಕೆ.ವಿ.ಸುಬ್ರಮಣಿ, ಮಂಟಪ ಅಲಂಕಾರ ಸಮಿತಿಗೆ ಚರಣ್, ಲಿಖಿತ್, ರಂಜಿತ್ ಕೃಷ್ಣಮೂರ್ತಿ, ಸೆಟ್ ವರ್ಕ್, ಧ್ವನಿಮುದ್ರಣ ಸೃಜನ್ ಹಾಗೂ ತಂಡ, ಕ್ರಿಯೇಟಿವ್ ಸ್ಟುಡಿಯೋ ಪದಾಧಿಕಾರಿಗಳು ನೇಮಕಗೊಂಡರು.
ಶ್ರೀದಂಡಿನ ಮಾರಿಯಮ್ಮ ದೇವಾಲಯ ಟ್ರಸ್ಟ್ ನ ಪ್ರಮುಖರು ಹಾಗೂ ದಸರಾ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ನೂತನ ಸಮಿತಿಗಳನ್ನು ರಚಿಸಲಾಯಿತು.