ಬ್ರೆಡ್‌ನೊಳಗೆ ಬಚ್ಚಿಟ್ಟು ಬೆಂಗಳೂರಿಗೆ ಕೊಕೇನ್ ಸಾಗಣೆ: ನೈಜೀರಿಯದ ಮಹಿಳೆ ಬಂಧನ

Dec 24, 2025 - 11:46
Dec 24, 2025 - 18:02
 0  897
ಬ್ರೆಡ್‌ನೊಳಗೆ ಬಚ್ಚಿಟ್ಟು ಬೆಂಗಳೂರಿಗೆ ಕೊಕೇನ್ ಸಾಗಣೆ:  ನೈಜೀರಿಯದ ಮಹಿಳೆ ಬಂಧನ

ಬೆಂಗಳೂರು, ಡಿ. 24: ನಗರದಲ್ಲಿ ಮಾದಕ ವಸ್ತು ಪೆಡ್ಲಿಂಗ್‌ಗೆ ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಂಡಿರುವ ಜಾಲದ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಈ ನಡುವೆಯೇ, ತಿನ್ನುವ ಬ್ರೆಡ್‌ ನೊಳಗೆ ಕೊಕೇನ್ ಬಚ್ಚಿಟ್ಟು ಸಾಗಣೆ ಮಾಡುತ್ತಿದ್ದ ನೈಜೀರಿಯ ಮೂಲದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತೆಯನ್ನು ಒಲಾಜಿಡೆ ಎಸ್ತಾ ಎಂದು ಗುರುತಿಸಲಾಗಿದ್ದು, ಬ್ರೆಡ್ ತುಂಡುಗಳನ್ನು ಕತ್ತರಿಸಿ ಅದರೊಳಗೆ ಕೊಕೇನ್ ತುಂಬಿ ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್ ಮೂಲಕ ತರಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಖಚಿತ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಸುಮಾರು 120 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಸುಮಾರು 65 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಆಹಾರ ಪದಾರ್ಥಗಳ ಮೂಲಕ ಮಾದಕ ವಸ್ತು ಸಾಗಣೆ ನಡೆಸಿರುವ ಈ ವಿಧಾನ ಪೊಲೀಸರನ್ನೇ ಅಚ್ಚರಿಗೊಳಿಸಿದೆ. ಪ್ರಕರಣ ಸಂಬಂಧ ಆರೋಪಿಯ ವಿರುದ್ಧ ಮಾದಕ ದ್ರವ್ಯ ಪದಾರ್ಥಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಡ್ರಗ್ ಜಾಲದ ಇತರ ಸಂಪರ್ಕಗಳು ಮತ್ತು ಪೂರೈಕೆ ಮೂಲ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0