ಡ್ರಗ್ಸ್ ಬೇಡ ಕನಸುಗಳನ್ನು ಬೆನ್ನಟ್ಟಿ: ಬೆಂಗಳೂರಿನಲ್ಲಿ ಕೊಡಗು ಬ್ಯಾಡ್ಮಿಂಟನ್ ಟೂರ್ನಿ ಯಶಸ್ವಿ

Jul 6, 2026 - 18:43
 0  211
ಡ್ರಗ್ಸ್ ಬೇಡ ಕನಸುಗಳನ್ನು ಬೆನ್ನಟ್ಟಿ: ಬೆಂಗಳೂರಿನಲ್ಲಿ ಕೊಡಗು ಬ್ಯಾಡ್ಮಿಂಟನ್ ಟೂರ್ನಿ ಯಶಸ್ವಿ

ನಾಪೋಕ್ಲು :ಡ್ರಗ್ಸ್ ಬೇಡ ಕನಸುಗಳನ್ನು ಬೆನ್ನಟ್ಟಿ’ಎಂಬ ಧ್ಯೇಯದೊಂದಿಗೆ ಆಯೋಜಿಸಲಾದ ಕೊಡಗು ಬ್ಯಾಡ್ಮಿಂಟನ್ ಟೂರ್ನಮೆಂಟ್ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಗೇಮ್ ಥಿಯರಿ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಪಂದ್ಯಾವಳಿಯಲ್ಲಿ ಕೊಡಗಿನ ಹಲವಾರು ತಂಡಗಳು ಭಾಗವಹಿಸಿ ರೋಚಕತೆ ನೀಡಿದವು.

ಅಂತಿಮ ಪಂದ್ಯದಲ್ಲಿ ಶೈಜೈ ಮತ್ತು ಮುಸ್ತಫಾ ಜೋಡಿ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರೆ,ದೀಪಕ್ ಮತ್ತು ಮುತಾಲಿ ಜೋಡಿ ರನ್ನರ್ಸ್-ಅಪ್ ಪ್ರಶಸ್ತಿಗೆ ಭಾಜನರಾದರು. ಪಂದ್ಯಾವಳಿಯನ್ನು ಚಮ್ಮು ಕುವಲೆರ,ಇರ್ಷಾ ಪುಡಿಯತಂಡ,ಆಬಿದ್ ಕುರಿಕಡೆ ಹಾಗೂ ಪವಾಸ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಯುವಜನರಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಿ,ಕ್ರೀಡೆಯ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಚಾಂಪಿಯನ್ ಹಾಗೂ ರನ್ನರ್ಸ್ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ದಾನಿಗಳು ವಿತರಿಸಿದರು. ಈ ಸಂದರ್ಭ ಇಸ್ ದ ಮ್ಯಾನ್ ಸಂಸ್ಥೆಯ ಪವಾಸ್,ಉದ್ಯಮಿಗಳಾದ ಶಿಬಿನ್,ಸಾದಿಕ್ ಸೇರಿದಂತೆ ಮತ್ತಿತರ ಪ್ರಮುಖರು ಕ್ರೀಡಾಭಿಮಾನಿಗಳು ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0