ನವೆಂಬರ್ 09 ಮಡಿಕೇರಿಯಲ್ಲಿ ಪರಮಾತ್ಮ ಪಂಜುರ್ಲಿ” ನಾಟಕ ಪ್ರದರ್ಶನ
ಮಡಿಕೇರಿ:ರಾಜ್ಯದ ಹಲವಾರು ಭಾಗಗಳಲ್ಲಿ ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾದ ಪಾಡ್ದನ ಆಧಾರಿತ ಕನ್ನಡ ನಾಟಕ “ಪರಮಾತ್ಮ ಪಂಜುರ್ಲಿ” ನಾಟಕವು ನವೆಂಬರ್ 09, 2025 (ಭಾನುವಾರ) ಸಂಜೆ 5.30ರಿಂದ ರಾತ್ರಿ 9.00ರವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಆದ್ದೂರಿ ಸೆಟ್ಟಿಂಗ್‌ನಲ್ಲಿ ಪ್ರದರ್ಶನಗೊಳ್ಳುವ ಈ ನಾಟಕವು ಪಂಜುರ್ಲಿ ದೈವದ ಮೂಲಕಥೆಯನ್ನು ಒಳಗೊಂಡಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ, ಮಂಗಳೂರು ತಂಡ ಈ ನಾಟಕವನ್ನು ನಡೆಸಿಕೊಡಲಿದೆ. ನಾಟಕ ಪ್ರಾರಂಭಕ್ಕೂ ಮುನ್ನ ಪಂಜುರ್ಲಿ ದೈವದ ಇತಿಹಾಸ ಮತ್ತು ಮಹತ್ವ ಕುರಿತು ಖ್ಯಾತ ವಾಗ್ಮಿ, ಜಾನಪದ ವಿದ್ವಾಂಸ ಹಾಗೂ ಪ್ರಸಿದ್ಧ ದೈವ ನರ್ತಕ ದಯಾನಂದ ಕತ್ತಲ್ ಸರ್ ಮಾಹಿತಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 ಪಿ. ಎಂ. ರವಿ – 9972073295 📞 ವಸಂತ್ – 9448895870