ಆ.10 ರಂದು ಚೇರಂಬಾಣೆಯ ಬೇಂಗ್ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ತೀನಿ ನಮ್ಮೆ ಪೈಪೋಟಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಮಡಿಕೇರಿ ಆ.3 : ಚೇರಂಬಾಣೆಯ ಬೇಂಗ್ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ತೀನಿ ನಮ್ಮೆ ಪೈಪೋಟಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.10 ರಂದು ನಡೆಯಲಿದೆ.
ಬೇಂಗ್ ನಾಡ್ ಕೊಡವ ಸಮಾಜದ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡಿರ ನಳಿನಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬೇಂಗ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚಿರಣಿಯಂಡ ದಿನೇಶ್ ಗಣಪತಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೇಂಗ್ ನಾಡ್ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕುಟ್ಟೇಟಿರ ಕೆ.ಕುಂಞಪ್ಪ ಪಾಲ್ಗೊಳ್ಳಲಿದ್ದಾರೆ. ಸಿನಿಮಾ ಕ್ಷೇತ್ರದ ಸಾಧಕರಾದ ರಾಷ್ಟç ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ರಾಷ್ಟ್ರದ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ, ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ಕಕ್ಕಡತ್ ರ ಬದ್ ಕ್ - ಅಂದ್ ಇಂದ್ ವಿಷಯದ ಕುರಿತು ಅಪ್ಪಾರಂಡ ರತಿ ಬಿದ್ದಪ್ಪ ಅವರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡಿರ ನಳಿನಿ ಪೂವಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಕಕ್ಕಡ ಕೊಡವ ತೀನಿ ಪೈಪೋಟಿ:
ನಾಡ್ ಕೋಳಿ ಕರಿ, ಕಕ್ಕಳೆ ಇಂಡ್ ಕರಿ, ಬೈಂಬಳೆ ಪಲ್ಯ, ಚುಟ್ಟ ಕೈಪುಳಿ ಪಜ್ಜಿ, ಚೋರಂಗೆ ಪಾರ, ತಾತೆತೊಪ್ಸ್ ಬರ್ತದ್, ಬಡವ ಕಜ್ಜಾಯ, ಮದ್ ಪುಟ್ಸ್, ಮದ್ ಪಾಯಸ ಮತ್ತು ಕೇಂಬುಕರಿ ಸ್ಪರ್ಧೆ ನಡೆಯಲಿದೆ. ಇದು ಮಹಿಳೆಯರಿಗೆ ಸೀಮಿತವಾದ ಸ್ಪರ್ಧೆಯಾಗಿದ್ದು, ಒಬ್ಬರು ಎರಡು ಸ್ಪರ್ಧೆಯಲ್ಲಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
