Kodagu

ಈದ್ ಮಿಲಾದ್ ಪ್ರಯುಕ್ತ ಎಸ್.ಎಸ್.ಎಫ್ ಹಾಗೂ ಎಸ್ ವೈ ಎಸ್ ಕಾರ್ಯಕರ್ತರಿಂದ ಎಮ್ಮೆಮಾಡು ಕೂರುಳಿಯಲ್ಲಿ ಸ್ವಚ್ಛತಾ ಅಭಿಯಾನ

admincoorgdaily

ಈದ್ ಮಿಲಾದ್ ಪ್ರಯುಕ್ತ  ಎಸ್.ಎಸ್.ಎಫ್ ಹಾಗೂ ಎಸ್ ವೈ ಎಸ್ ಕಾರ್ಯಕರ್ತರಿಂದ ಎಮ್ಮೆಮಾಡು ಕೂರುಳಿಯಲ್ಲಿ ಸ್ವಚ್ಛತಾ ಅಭಿಯಾನ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1501ನೇ ಜನ್ಮದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಎಸ್ ವೈ ಎಸ್, ಎಸ್ ಎಸ್ ಎಫ್ ಎಮ್ಮೆಮಾಡು ಕೂರುಳಿ ಪರಂಬು ಶಾಖೆ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಎಮ್ಮೆಮಾಡು ಕೂರುಳಿ ಪರಂಬು ಮುಖ್ಯ ರಸ್ತೆಯಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದ ಕಾರ್ಯಕರ್ತರು ರಸ್ತೆಯ ಎರಡು ಬದಿಗಳ ಇಕ್ಕೆಲಗಳಲ್ಲಿ ಆವರಿಸಿಕೊಂಡಿದ್ದ ಕಾಡುಗಳನ್ನು ಕಡಿದು ಪ್ಲಾಸ್ಟಿಕ್ ಇನ್ನಿತರ ಕಸ ತ್ಯಾಜ್ಯಗಳನ್ನು ತೆರವುಗೊಳಿಸಿ ಸಾರ್ವಜನಿಕರ ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ವ್ಯವಸ್ಥೆಕಲ್ಪಿಸಿದರು.

ಬಳಿಕ ಕೂರುಳಿ ಪರಂಬು ಸರ್ಕಾರಿ ಶಾಲೆಯ ಆವರಣವನ್ನು ಶ್ರಮಾಧಾನದ ಮೂಲಕ ಸ್ವಚ್ಛಗೊಳಿಸಿದರು. ಈ ಸಂದರ್ಭ ಸ್ವಚ್ಛತಾ ಅಭಿಯಾನದಲ್ಲಿ ಶಾಖೆಯ ಅಧ್ಯಕ್ಷರಾದ ನೌಶಾದ್ ಲತೀಫಿ ಎಮ್ಮೆಮಾಡು, ಕಾರ್ಯದರ್ಶಿ ಜಮಾಲ್ ಹಾಜಿ ಪರಂಬು, ಕೋಶಾಧಿಕಾರಿ ಹನೀಫ ಪುದರೆ,ಸೇರಿದಂತೆ ಶಾಖೆಯ ಎಲ್ಲ ಕಾರ್ಯಕರ್ತರು ಪಾಲ್ಗೊಂಡಿದ್ದರು.