ಜುಲೈ 25 ಮತ್ತು 26ರಂದು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ
admincoorgdaily

ಕುಶಾಲನಗರ, ಜು.23: ಕುಶಾಲನಗರ ಅರಣ್ಯ ವಲಯದ ಆನೆಕಾಡು ಶಾಖೆಯ ಹೊರೂರು, ಮೋದೂರು , ಅತ್ತೂರು ನಲ್ಲೂರು ಗ್ರಾಮದ ಕೊರ್ತಿಕಾಡು, ಕಾರೆಕೊಲ್ಲಿ ಗ್ರೀನ್ ಲ್ಯಾoಡ್, ಮತ್ತಿಕಾಡು, ಭೂತನಕಾಡು, ಟಾಟಾ ಕಾಫಿ ಮತ್ತು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಅಂದಾಜು 15 ಕಾಡಾನೆಗಳನ್ನು ಆನೆಕಾಡು ಸಂರಕ್ಷಿತ ಅರಣ್ಯಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಶನಿವಾರ ಮತ್ತು ಭಾನುವಾರ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ವಲಯ ಹಾಗೂ ಉಪವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಆರ್ ಆರ್ ಟಿ ಪಡೆಯನ್ನೊಳಗೊಂಡಂತೆ 20 ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಈ ಹಿನ್ನಲ್ಲೆಯಲ್ಲಿ ಈ ಭಾಗದ ರೈತರು, ಕಾರ್ಮಿಕರು, ಶಾಲೆಗೆ ತೆರಳುವ ಮಕ್ಕಳು, ಹಿರಿಯ ನಾಗರೀಕರು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಹಾಗೂ ಕಾರ್ಯಾಚರಣೆ ದಿನ ತೋಟದಲ್ಲಿ ಕೆಲಸ ಮಾಡದಂತೆ ಹಾಗೂ ಕಾರ್ಯಾಚರಣೆಗೆ ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್ ಪ್ರಕಟಣೆಯಲ್ಲಿ ಕೋರಿದ್ದಾರೆ.