ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಯಶಸ್ವಿ
ಕುಶಾಲನಗರ, ಜು.23: ಕುಶಾಲನಗರ ಅರಣ್ಯ ವಲಯದ ಆನೆಕಾಡು ಶಾಖೆಯ ಮೀನುಕೊಲ್ಲಿ, ಹೇರೂರು, ಮೋದೂರು , ಅತ್ತೂರು - ನಲ್ಲೂರು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಆನೆಕಾಡು ಸಂರಕ್ಷಿತ ಅರಣ್ಯಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ.
ಶನಿವಾರ 6 ಮತ್ತು ಭಾನುವಾರ 2 ಕಾಡಾನೆಗಳನ್ನು ಡ್ರೋನ್ ಸಹಾಯದಿಂದ ಪತ್ತೆ ಹಚ್ಚಿ ಹಿಮ್ಮೆಟ್ಟಿಸಲಾಗಿದ್ದು ಈ ಕಾರ್ಯಾಚರಣೆಯಲ್ಲಿ ವಲಯ ಹಾಗೂ ಉಪವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಆರ್ ಆರ್ ಟಿ ಪಡೆಯನ್ನೊಳಗೊಂಡಂತೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಸದ್ಯಕ್ಕೆ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಹಿಮ್ಮೆಟ್ಟಿಸಲಾಗಿದ್ದರೂ ಆನೆಗಳು ಅರಣ್ಯದಿಂದ ಹಿಂದಿರುಗುವ ಸಾಧ್ಯತೆಗಳು ಇರಬಹುದೆಂದು ಮೂಲಗಳಿಂದ ತಿಳಿದು ಬಂದಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
