National News

ನಮ್ ಜೀವನ ನಮ್ದಲ್ವಾ! ತಾಯಿಯ ಹಳೆಯ ಆಡಿಯೋ ವೈರಲ್; ಕೊಡಗಿನ ಬೆಡಗಿನ ರಶ್ಮಿಕಾ ಮಂದಣ್ಣ ಹೇಳಿದ್ದೇನು ಗೊತ್ತೇ!

admincoorgdaily

Photo credit: @rashmika mandanna Instagram story

ಹೈದರಾಬಾದ್; ನಟ ವಿಜಯ್ ದೇವರಕೊಂಡ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ ದಾಂಪತ್ಯದ ಖುಷಿಯಲ್ಲಿದ್ದಾರೆ. ದೇವಸ್ಥಾನಗಳಲ್ಲಿ ಅನ್ನ ಸಂತರ್ಪಣೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಘೋಷಣೆ ಹಾಗೂ ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ದಂಪತಿ ಸಾರ್ಥಕತೆ ಮೆರೆಯುತ್ತಿದ್ದಾರೆ.

ಈ ಖುಷಿ ಮಧ್ಯೆಯೇ ಕೆಲವರು ರಶ್ಮಿಕಾ ಮಂದಣ್ಣ ನೆಮ್ಮದಿ ಕೆಡಿಸಲು ಮುಂದಾಗಿದ್ದು, ಅಂತಹವರ ವಿರುದ್ಧ ನಟಿ ತಿರುಗಿಬಿದ್ದಿದ್ದಾರೆ. ರಶ್ಮಿಕಾ ತಾಯಿ ಸುಮನ್ ಮಂದಣ್ಣರದ್ದು ಎನ್ನಲಾದ ಆಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ರಶ್ಮಿಕಾ ಹೊಸ ಜೀವನ ಆರಂಭಿಸಿರುವಾಗಲೇ ಕೆಲ ಕಿಡಿಗೇಡಿಗಳು ಆ ಹಳೆಯ ಆಡಿಯೋವನ್ನು ಮತ್ತೆ ವೈರಲ್ ಮಾಡಿದ್ದರು.

ಇದು ನಟಿಯ ಗಮನಕ್ಕೆ ಬಂದಿದ್ದು, ಆಡಿಯೋ ವೈರಲ್ ಮಾಡಿದವರ ವಿರುದ್ಧ ರಶ್ಮಿಕಾ ಗರಂ ಆಗಿದ್ದು, ಆಡಿಯೋ ಡಿಲೀಟ್‌ ಮಾಡದಿದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. 'ಕಳೆದ 8 ವರ್ಷಗಳಿಂದ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ಹೇಳಿಕೆಗಳನ್ನು ತಿರುಚಿ, ತಪ್ಪಾಗಿ ಅರ್ಥೈಸಲಾಗುತ್ತಿದೆ. ಕೇವಲ ವೀಕ್ಷಣೆ, ಲೈಕ್ ಪಡೆಯವುದಕ್ಕಾಗಿ ದ್ವೇಷ ಹರಡಲಾಗುತ್ತಿದೆ. ಆದರೂ ನಾನು ಮೌನವಾಗಿದ್ದೆ. ಇದು ಮಿತಿ ಮೀರಿದ್ದು, ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಎಂಟು ವರ್ಷಗಳ ಹಿಂದಿನ ಆಡಿಯೋವನ್ನು ಇದೀಗ ವೈರಲ್ ಮಾಡಿ, ನನ್ನ ಜೀವನಕ್ಕೆ ಧಕ್ಕೆ ತರುವ ಪ್ರಯತ್ನಗಳಾಗುತ್ತಿವೆ. ತಪ್ಪು ಮಾಹಿತಿ ಹಂಚಿಕೊಳ್ಳುವ ಮೂಲಕ ನನ್ನ ಮಾನಹಾನಿ ಮಾಡಲಾಗುತ್ತಿದೆ. ಸದ್ಯ ವೈರಲ್ ಆಗಿರುವ ಆಡಿಯೋವನ್ನು 24 ಗಂಟೆಗಳಲ್ಲಿ ತೆರವುಗೊಳಿಸದಿದ್ದರೆ,ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

 ಕನ್ನಡದಲ್ಲಿಯೇ ಟಾಂಗ್ ಕೊಟ್ಟ ನಟಿ; ರಶ್ಮಿಕಾ ಮಂದಣ್ಣ ಬರೆದಿರುವ ಪತ್ರದಲ್ಲಿ ಕೊನೆಯದಲ್ಲಿ ಕನ್ನಡದಲ್ಲಿದ್ದು, ನನ್ನ ತಂಟೆಗೆ ಬರಬೇಡಿ ಎಂದಿದ್ದಾರೆ. 'ಒಂದು ಮಾತು ಈ ಸಮಯದಲ್ಲಿ ಹೇಳಬೇಕು ಅನಿಸುತ್ತಿದೆ. ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡು ಮಾತಾಡುವ ಜನ, ಒಂದು ಅರ್ಥ ಮಾಡಿಕೊಳ್ಳಲಿ. ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತಾ ನಿರ್ಧಾರ ಮಾಡೋಕ್ಕಾಗುತ್ತಾ. ನಮ್ ಜೀವನ ನಮ್ದಲ್ವಾ? ನಮ್ ನಿರ್ಧಾರ ನಾವೇ ತೆಗೆದುಕೊಳ್ಳಬೇಕು. ಮತ್ತೆ ತೆಗೆದುಕೊಳ್ಳುತ್ತೇವೆ ಕೂಡ' ಎಂದು ಟ್ರೋಲರ್ಸ್ ಗಳಿಗೆ ರಶ್ಮಿಕಾ ಟಾಂಗ್ ನೀಡಿದ್ದಾರೆ.