ಓವರ್ ಸ್ಪೀಡ್:ಮೂರು ಬೈಕ್ ವಶಕ್ಕೆ ,ಪ್ರಕರಣ ದಾಖಲು
ಕುಶಾಲನಗರ:ರಾಜ್ಯ ಹೆದ್ದಾರಿಯ ಆನೆಕಾಡಿನಿಂದ ಕುಶಾಲನಗರದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ದ್ವಿಚಕ್ರವಾಹನಗಳನ್ನು ಚಾಲನೆ ಮಾಡಿಕೊಂಡು ಬಂದ 3 ವಾಹನಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲೆ ಮಾಡಿದ್ದಾರೆ.ಸಂಚಾರಿ ಪೋಲಿಸ್ ನಿಯಮದ ಪ್ರಕಾರ ಬಿ.ಎನ್. ಎಸ್. ಕಲಂ281,IMV act 179,184,189 ಕಲಂಗಳಡಿಯಲ್ಲಿ ಪ್ರಕರಣ ಸಂಚಾರಿ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಗಣೇಶ್ ರವರು ಮಾಹಿತಿ ನೀಡಿದ್ದಾರೆ.