ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾಗಿ ಪಿ.ಆರ್. ರಾಜೇಶ್, ಕಾಯ೯ದಶಿ೯ಯಾಗಿ ಡಾ.ಚೇತನ್ ಆಯ್ಕೆ

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾಗಿ ಪಿ.ಆರ್. ರಾಜೇಶ್, ಕಾಯ೯ದಶಿ೯ಯಾಗಿ ಡಾ.ಚೇತನ್ ಆಯ್ಕೆ
ಡಾ.ಚೇತನ್

ಮಡಿಕೇರಿ ಜೂನ್ 29 :ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷರಾಗಿ ಪೂಳಕಂಡ ರಾಜೇಶ್ ಮತ್ತು ಕಾಯ೯ದಶಿ೯ಯಾಗಿ ಡಾ.ಚೇತನ್ ಜಿ.ಡಿ. ಆಯ್ಕೆಯಾಗಿದ್ದಾರೆ.

ನೂತನ ವಲಯ ಸೇನಾನಿಯಾಗಿ ಪೊನ್ನಚ್ಚನ ಮಧುಸೂದನ್ ಆಯ್ಕೆಯಾಗಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ 22 ನೇ ವಷ೯ದ ಅಧ್ಯಕ್ಷರಾಗಿ ಪಿ.ಆರ್. ರಾಜೇಶ್, ಕಾಯ೯ದಶಿ೯ಯಾಗಿ ಡಾ.ಚೇತನ್ ಜಿ.ಡಿ.ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 4 ರಂದು ಶನಿವಾರ ಮಡಿಕೇರಿ ಕೆಳಗಿನ ಗೌಡ ಸಮಾಜದಲ್ಲಿ ಆಯೋಜಿತವಾಗಿದೆ.

ಬೆಂಗಳೂರಿನ ರೋಟರಿ ಜಿಲ್ಲೆ3191ನ ಮಾಜಿ ಸಹಾಯಕ ಗವನ೯ರ್ ಪ್ರಕಾಶ್ ಬೆಳವಾಡಿ ಪ್ರದಗ್ರಹಣ ನೆರವೇರಿಸಲಿದ್ದು, ಸಹಾಯಕ ಗವನ೯ರ್ ಎಚ್.ಎಸ್. ವಸಂತ್ ಕುಮಾರ್, ನಿಕಟಪೂವ೯ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ.ಕಾಯ೯ಪ್ಪ ವೇದಿಕೆಯಲ್ಲಿರುತ್ತಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಪ್ರಕಟಣೆ ತಿಳಿಸಿದೆ.