ಪಾಲಿಬೆಟ್ಟ;ಮನೆಗೆ ನುಗ್ಗಿ ಚಿನ್ನ-ಬೆಳ್ಳಿ ಕಳ್ಳತನ
admincoorgdaily

ಸಿದ್ದಾಪುರ, ಜೂ. 22: ಪಾಲಿಬೆಟ್ಟದ ಹೊಸಳ್ಳಿ ಕಾಫಿ ತೋಟದ ವಸತಿಗೃಹದಲ್ಲಿ ಕಳ್ಳರು ನುಗ್ಗಿ ಚಿನ್ನ-ಬೆಳ್ಳಿ ಆಭರಣ ಕಳ್ಳತನ ಮಾಡಿದ್ದಾರೆ. ಟಾಟಾ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಭೋಜಣ್ಣ ಅವರು ಮನೆಗೆ ಬೀಗ ಹಾಕಿ ಮೈಸೂರಿನ ಸಂಬಂಧಿಕರ ಮನೆಗೆ ತೆರಳಿದ್ದರು.
ರಾತ್ರಿ ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಹಿಂಭಾಗದ ಬಾಗಿಲು ಮುರಿದು ಒಳನುಗ್ಗಿ, ಕೋಣೆಯಲ್ಲಿಟ್ಟಿದ್ದ ಚಿನ್ನದ ಓಲೆ ಮತ್ತು ಬೆಳ್ಳಿಯ ಓಲೆ ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಭೋಜಣ್ಣ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.