ಪಾಲಿಬೆಟ್ಟ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ: ನೂತನ ಅಧ್ಯಕ್ಷರಾಗಿ ಸದಾ ಕುಶಾಲಪ್ಪ ಅಧಿಕಾರ ಸ್ವೀಕಾರ

Jul 5, 2026 - 19:23
 0  171
ಪಾಲಿಬೆಟ್ಟ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ:  ನೂತನ ಅಧ್ಯಕ್ಷರಾಗಿ ಸದಾ ಕುಶಾಲಪ್ಪ ಅಧಿಕಾರ ಸ್ವೀಕಾರ

ಮಡಿಕೇರಿ :ಪಾಲಿಬೆಟ್ಟ ಲಯನ್ಸ್ ಕ್ಲಬ್ ನ 2006- 27 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲಯನ್ಸ್ ಸೇವಾ ಭವನದ ಅನುಗೃಹ ಸಭಾಂಗಣದಲ್ಲಿ ನಡೆಯಿತು. ಲಯನ್ಸ್ ಜಿಲ್ಲಾ ಚೀಫ್ ಕೋರ್ಡಿನೇಟರ್ ಗೀತಾ ಆರ್ ರಾವ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಬಳಿಕ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ಸ್ಥಳೀಯ ಸಾರ್ವಜನಿಕರ ಅವಶ್ಯಕತೆಗಳನ್ನು ಆಧರಿಸಿ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವಂತೆ ನೂತನ ಆಡಳಿತ ಮಂಡಳಿಗೆ ಸೂಚಿಸಿದರು. ಪಾಲಿಬೆಟ್ಟ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದ್ದು ಸೇವಾ ಮನೋಭಾವ ದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು 2025-26ನೇ ಸಾಲಿನಲ್ಲಿ ಪಾಲಿಬೆಟ್ಟ ಲಯನ್ಸ್ ಕ್ಲಬ್ ನವರು ಅನುಷ್ಠಾನಗೊಳಿಸಿದ ಸೇವಾ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಪಾಲಿಬೆಟ್ಟ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸದಾ ಕುಶಾಲಪ್ಪ, ಕಾರ್ಯದರ್ಶಿಯಾಗಿ ಡಾ. ಭವಿಷ್ಯ ಕುಮಾರ್, ಖಜಾಂಚಿಯಾಗಿ ರತ್ನ ಸುಬ್ಬಯ್ಯ, ಉಪಾಧ್ಯಕ್ಷರುಗಳಾಗಿ. ಡೊಮ್ಮಿ ಪಿ. ರೊಜಾರಿಯೊ, ರಾಣಾ ಮುತ್ತಪ್ಪ, LCIF ಚೇರ್ ಪರ್ಸನ್ ಸುಬ್ರಮಣಿ PS, ಸೇವಾ ಅಧ್ಯಕ್ಷರಾಗಿ ಅನಂತರಾಮ ಪಿ ಎ, ಮಾರ್ಕೆಟಿಂಗ್ & ಕಮ್ಯುನಿಕೇಷನ್ ಡಾ. ಗಣಪತಿ ಎ ಸಿ, ಮೆಂಬರ್ಶಿಪ್ ಚೇರ್ ಪರ್ಸನ್ ಎಂ.ಎನ್. ಅಚ್ಚಯ್ಯ, PRO ಎಂ. ಎಸ್. ಠವಿ , ಬೀನಾ ಕುಶಾಲಪ್ಪ ತಮೇರ್, ಶಾರದ ಪೊನ್ನಪ್ಪ ಟೈಲ್ ಟ್ವಿಸ್ಟರ್ ಆಗಿ ಅಧಿಕಾರ ವಹಿಸಿಕೊಂಡರೆ.

 ನಿರ್ದೇಶಕರಿಗಳಾಗಿ ಬಿ.ಪಿ. ಗಣಪತಿ, ಸ್ವರೂಪ್ ಐಯಪ್ಪ, ಕೆ.ಎಂ.ಅಯ್ಯಣ್ಣ, ಮೀರಾ ಸುಬ್ರಮಣಿ, ಅನಿತಾ ಠವಿ, ಕನಿಕಾ ಅಯ್ಯಪ್ಪ, ನಿಶಾ ಗಣಪತಿ, ಇನಿತಾ ನಾಚಪ್ಪ, ಸರೋಜಾ ಪೊನ್ನಪ್ಪ ಪ್ರಮಾಣ ವಚನ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಪಿ.ಎಸ್. ಸುಬ್ರಮಣಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿತಾ ಅಚ್ಚಯ್ಯ ಪ್ರಾರ್ಥಿಸಿದರೆ ಪುಷ್ಪ ಸುಬ್ಬಯ್ಯ ಅತಿಥಿಗಳ ಪರಿಚಯ ಹಾಗೂ ಚೇಂದ್ರಿಮಾಡ ಅಚ್ಚಯ್ಯ ನೂತನ ಪದಾಧಿಕಾರಿಗಳ ಪರಿಚಯ ಮಾಡಿಕೊಟ್ಟರು. ಭವಿಷ್ಯ ಕುಮಾರ್ ವಂದಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0