ಪಾಸ್‌ಪೋರ್ಟ್ ಶುಲ್ಕ ಏರಿಕೆ: ಜುಲೈ 01 ರಿಂದ ಹೊಸ ದರ ಜಾರಿ

Jun 25, 2026 - 23:34
 0  392
ಪಾಸ್‌ಪೋರ್ಟ್ ಶುಲ್ಕ ಏರಿಕೆ:  ಜುಲೈ 01 ರಿಂದ ಹೊಸ ದರ ಜಾರಿ

ಹೊಸದಿಲ್ಲಿ, ಜೂ. 25: ಸುಮಾರು 14 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ಶುಲ್ಕವನ್ನು ಹೆಚ್ಚಿಸಿದೆ. ಪರಿಷ್ಕೃತ ದರ ಜುಲೈ 1, 2026ರಿಂದ ಜಾರಿಗೆ ಬರಲಿದೆ. 

18 ವರ್ಷ ಮೇಲ್ಪಟ್ಟವರಿಗೆ ಸಾಮಾನ್ಯ ಯೋಜನೆಯಡಿ 36 ಪುಟಗಳ ಹೊಸ ಪಾಸ್‌ಪೋರ್ಟ್ ಶುಲ್ಕ 1,500 ರೂ.ಯಿಂದ 2,500 ರೂ.ಗೆ ಏರಿಕೆಯಾಗಿದೆ. ತತ್ಕಾಲ್ ಯೋಜನೆಯಡಿ 3,500 ರೂ.ಯಿಂದ 5,000 ರೂ.ಗೆ ಹೆಚ್ಚಳ ಮಾಡಲಾಗಿದೆ.

60 ಪುಟಗಳ ಪಾಸ್‌ಪೋರ್ಟ್ ಶುಲ್ಕ ಸಾಮಾನ್ಯ ವರ್ಗದಲ್ಲಿ 2,000 ರೂ.ಯಿಂದ 3,500 ರೂ.ಗೆ, ತತ್ಕಾಲ್‌ನಲ್ಲಿ 4,000 ರೂ.ಯಿಂದ 6,000 ರೂ.ಗೆ ಏರಿಕೆಯಾಗಿದೆ.

ಕಳೆದುಹೋದ ಅಥವಾ ಹಾನಿಗೊಳಗಾದ 36 ಪುಟಗಳ ಪಾಸ್‌ಪೋರ್ಟ್ ಬದಲಿಗೆ ಹೊಸದು ಪಡೆಯಲು ಸಾಮಾನ್ಯ ಯೋಜನೆಯಡಿ 5,000 ರೂ. ಹಾಗೂ ತತ್ಕಾಲ್‌ನಲ್ಲಿ 7,500 ರೂ. ಪಾವತಿಸಬೇಕಾಗುತ್ತದೆ. 60 ಪುಟಗಳ ಪಾಸ್‌ಪೋರ್ಟ್‌ಗೆ ಕ್ರಮವಾಗಿ 6,000 ರೂ. ಮತ್ತು 8,500 ರೂ. ನಿಗದಿಪಡಿಸಲಾಗಿದೆ.

18 ವರ್ಷದೊಳಗಿನವರಿಗೆ 36 ಪುಟಗಳ ಪಾಸ್‌ಪೋರ್ಟ್‌ಗೆ ಸಾಮಾನ್ಯ ಯೋಜನೆಯಡಿ 1,750 ರೂ. ಹಾಗೂ ತತ್ಕಾಲ್‌ನಲ್ಲಿ 4,250 ರೂ. ಆಗಲಿದೆ. ಕಳೆದುಹೋದ ಪಾಸ್‌ಪೋರ್ಟ್ ಬದಲಿಸಲು ಕ್ರಮವಾಗಿ 4,250 ರೂ. ಮತ್ತು 6,750 ರೂ. ಶುಲ್ಕ ವಿಧಿಸಲಾಗುತ್ತದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 1
Wow Wow 0