ದೇಶ ಪ್ರೇಮ ಇಸ್ಲಾಮಿನ ಅವಿಭಾಜ್ಯ ಅಂಗ: ಸಿದ್ದೀಕ್ ಅಹ್ಸನಿ ಅಭಿಪ್ರಾಯ
ಅಮ್ಮತ್ತಿ: ಒಬ್ಬ ಮುಸಲ್ಮಾನನಿಗೆ ದೇಶದ ಮೇಲಿನ ಗೌರವ ಹಾಗು ಪ್ರೀತಿ - ವಿಶ್ವಾಸದ ಭಾಗವಾಗಿದೆ ಎಂದು ಅಮ್ಮತಿ ತಹಲೀಮುದ್ದೀನ್ ಮದ್ರಸಾ ಪ್ರಾಂಶುಪಾಲರಾದ ಸಿದ್ದೀಕ್ ಅಹ್ಸನಿ ಅಭಿಪ್ರಾಯಪಟ್ಟರು. ದೇಶದ 79ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ ಮಾಜಿ ಯೋಧರಾದ ಅಬ್ದುಲ್ ಗೌಸ್ ಅವರನ್ನು ಜಮಾತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಮ್ಮತ್ತಿ ಶಾಫೀ ಜುಮಾ ಮಸೀದಿಯ ಅಧ್ಯಕ್ಷರಾದ ಹಂಸ, ಪ್ರಧಾನ ಕಾರ್ಯದರ್ಶಿ ಅಲಿ, ಸಮಿತಿ ಸದಸ್ಯರು ಅಧ್ಯಾಪಕರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.