ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ 50 ಹಣ್ಣಿನ ಗಿಡಗಳ ನೆಡುವ ಕಾರ್ಯಕ್ರಮ
ವಿರಾಜಪೇಟೆ: ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂ ಸೇವಕರಿಂದ ಸುಮಾರು 50 ಹಣ್ಣಿನ ಗಿಡಗಳನ್ನು ನೆಡುವ ವೃಕ್ಷಾರೋಪಣ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜು, ಜೈಭಾರತ್ ಆರ್ಮಿ ಕೋಚಿಂಗ್ ಸೆಂಟರ್, ಅರಣ್ಯ ಇಲಾಖೆ ವಿಭಾಗೀಯ ಕಚೇರಿ ಹಾಗೂ ಶ್ರೀ ಆದಿ ಬೈತೂರುಪ್ಪ ಭಕ್ತ ಜನ ಸಂಘದ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜೈಭಾರತ್ ಆರ್ಮಿ ಕೋಚಿಂಗ್ ಸೆಂಟರ್ ತರಬೇತುದಾರರಾದ ಕುಟ್ಟಂಡ ಲವ ಪೊನ್ನಪ್ಪ, ಆದಿ ಬೈತೂರುಪ್ಪ ಭಕ್ತ ಜನ ಸಂಘದ ಅಧ್ಯಕ್ಷರಾದ ಅಮ್ಮಣಕುಟ್ಟಂಡ ಎ. ಕಿರಣ್ ಸುಬ್ರಮಣಿ, ಸಂಚಾಲಕ ಚೇಂದಂಡ ಶಿವಕುಮಾರ್, ಅರಣ್ಯಾಧಿಕಾರಿ ರಾಘವ, ಫಾರೆಸ್ಟ್ ರೇಂಜ್ ಅಧಿಕಾರಿ ಶಿವರಾಮ್ ಉಪಸ್ಥಿತರಿದ್ದರು.
ಅಲ್ಲದೆ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಅನುಷಾ ತಿಮ್ಮಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ. ಪದ್ಮ ಹಾಗೂ ಡಾ. ವೀಣಾ ಕೆ.ಜಿ, ಉಪನ್ಯಾಸಕರಾದ ದೇಚಮ್ಮ ಎಂ.ಬಿ., ಬೋಪಣ್ಣ ಕೆ.ಪಿ., ದಿವ್ಯ, ಜೈಭಾರತ್ ಕೋಚಿಂಗ್ ಸೆಂಟರ್‌ನ ತರಬೇತಿ ವಿದ್ಯಾರ್ಥಿಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
