Kodagu

ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳಿಂದ ನಾಟಿ ಸಂಭ್ರಮ

admincoorgdaily

ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳಿಂದ ನಾಟಿ ಸಂಭ್ರಮ

ಮಡಿಕೇರಿ ಸೆ. 02- ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿನ ಕೌಶಲ್ ಬೋಧ್ ಕಲಿಕೆಯ ಅಂಗವಾಗಿ ನಗರದ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೊಲಗದ್ದೆಯ ನಾಟಿ ಕಾರ್ಯದ ಅನುಭವವನ್ನು ಕಲ್ಪಿಸಿಕೊಡಲಾಯಿತು. ಕಗ್ಗೋಡ್ಲು ಗ್ರಾಮದ ನಿಯತಾ ದೇವಯ್ಯ ಸೋಮಣ್ಣ ಅವರ ಗದ್ದೆಯಲ್ಲಿ 7ನೇ ತರಗತಿಯ 70 ವಿದ್ಯಾರ್ಥಿಗಳು ,ಶಿಕ್ಷಕರ ತಂಡವು ಭಾಗವಹಿಸಿತ್ತು.

ಮಕ್ಕಳು ರೈತರೊಂದಿಗೆ ಗದ್ದೆಗಿಳಿದು ಭತ್ತದ ಸಸಿಗಳನ್ನು ಅಗೆ ತೆಗೆದು ನಾಟಿ ಮಾಡುವುದರ ಮೂಲಕ ಕೃಷಿ ಚಟುವಟಿಕೆಯನ್ನು ಸ್ವಯಂ ಅನುಭವಿಸಿದರು. ಶಿಕ್ಷಕರು ಮಕ್ಕಳಿಗೆ ಭತ್ತದ ಬೆಳೆ, ನಾಟಿ ವಿಧಾನ, ಗದ್ದೆಯ ಮಹತ್ವ ಮತ್ತು ರೈತರ ಶ್ರಮದ ಬಗ್ಗೆ ಮಾಹಿತಿ ನೀಡಿದರು. ಕೆಸರುಮಯವಾದ ಗದ್ದೆಯಲ್ಲಿ ಮಕ್ಕಳು ಉತ್ಸಾಹದಿಂದ ನಾಟಿ ಮಾಡಿದರು. ಪುಸ್ತಕದ ಕಲಿಕೆಯ ಜೊತೆಗೆ ಇಂತಹ ಕೌಶಲ್ಯಾಧಾರಿತ ಕಲಿಕೆಯು ಮಕ್ಕಳಲ್ಲಿ ಶ್ರಮದ ಮೌಲ್ಯ, ಆಹಾರದ ಮಹತ್ವ ಮತ್ತು ಕೃಷಿಯ ಬಗ್ಗೆ ಗೌರವ ಮೂಡಿಸುತ್ತದೆ. ಈ ಚಟುವಟಿಕೆಯು ಮಕ್ಕಳಿಗೆ ಅವಿಸ್ಮರಣೀಯ ಅನುಭವವನ್ನು ನೀಡಿತು.