ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಪೊನ್ನಂಪೇಟೆ ತಾಲೂಕು ವತಿಯಿಂದ ಕವನ ವಾಚನ ಸ್ಪರ್ಧೆ

May 22, 2026 - 11:55
 0  57
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಪೊನ್ನಂಪೇಟೆ ತಾಲೂಕು ವತಿಯಿಂದ  ಕವನ ವಾಚನ ಸ್ಪರ್ಧೆ

ಪೊನ್ನಂಪೇಟೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ, ಕೊಡಗು ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ಆನ್ಲೈನ್ ಕವನ ವಾಚನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

 ಸ್ಪರ್ಧೆಯು ಪೊನ್ನಂಪೇಟೆ ತಾಲೂಕು ವ್ಯಾಪ್ತಿಗೆ ಸೀಮಿತವಾಗಿ ನಡೆಯಲಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಆಸಕ್ತ ವಿದ್ಯಾರ್ಥಿಗಳು, ತಮ್ಮ ಹೆಸರು, ಶಾಲೆ ಮತ್ತು ತರಗತಿಯನ್ನು ಉಲ್ಲೇಖಿಸಿ, ಕವನದ ರಚನೆಕಾರರ ಹೆಸರಿನೊಂದಿಗೆ ಅಥವ ಸ್ವರಚಿತ ಕವನಗಳನ್ನು 3 ನಿಮಿಷದ ಒಳಗಾಗಿ ವಾಚನ ಮಾಡಿ, ರೆಕಾರ್ಡ್ ಮಾಡಿದ ವಿಡಿಯೋವನ್ನು, ನಳಿನಿ ಹೆಚ್ ಆರ್ ಅವರ ವಾಟ್ಸಾಪ್ ಸಂಖ್ಯೆ 7338617817ಗೆ ದಿನಾಂಕ 30/05/2026ರ ಒಳಗಾಗಿ ತಲುಪುವಂತೆ ಕಳುಹಿಸಬಹುದು.

 ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಅಭಿನಂದನಾಪತ್ರ ನೀಡಲಾಗುವುದು, ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾದ,ಚೇಂದೀರ ರಮ್ಯಾ ಜಗನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0