ಕೊಡಗಿನ ಇಬ್ಬರು ಡ್ರಗ್ಸ್ ಪೆಡ್ಲರ್ ಗಳಿಗೆ ಪೊಲೀಸ್ ಬಿಸಿ:ಅಶ್ರಫ್ ಬಳ್ಳಾರಿ,ನುಫೈಲ್ ಕಲಬುರ್ಗಿ ಜೈಲಿಗೆ
admincoorgdaily

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಡ್ರಗ್ಸ್ ಜಾಲಕ್ಕೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಾಪೋಕ್ಲು ಮೂಲದ ಅಶ್ರಫ್ ಹಾಗೂ ಮಡಿಕೇರಿ ನಗರದ ನುಫೈಲ್ ಎಂಬ ಇಬ್ಬರು ಪ್ರಮುಖ ಪೆಡ್ಲರ್‌ಗಳ ವಿರುದ್ಧ ಪಿಐಟಿ ಎನ್‌ಡಿಪಿಎಸ್ ಕಾಯ್ದೆ ಅನ್ವಯ ಬಂಧನದ ಕ್ರಮ ಕೈಗೊಳ್ಳಲಾಗಿದೆ.
ಎಸ್‌ಪಿ ಆರ್.ಎನ್. ಬಿಂದುಮಣಿ ಮಾಹಿತಿ ನೀಡಿ,ಅಶ್ರಫ್ 2018ರಿಂದ 2026ರವರೆಗೆ 6 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಆತನನ್ನು ಬಳ್ಳಾರಿ ಕಾರಾಗೃಹದಲ್ಲಿ ಬಂಧಿಸಲಾಗಿದೆ. 15 ಕೆಜಿ ಗಾಂಜಾ ಪ್ರಕರಣದ ಆರೋಪಿ ನುಫೈಲ್ ವಿರುದ್ಧ ಮಡಿಕೇರಿ ಸೇರಿ ಬೆಂಗಳೂರಿನಲ್ಲಿ 8 ಪ್ರಕರಣ ಇದ್ದು, ಒಂದು ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಆತನನ್ನು ಕಲಬುರ್ಗಿ ಕಾರಾಗೃಹದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.