ಸ್ಕೋಡ ಕಾರಿನಲ್ಲಿ ಅಪಾಯಕಾರಿ ಚಾಲನೆ: ಪೊಲೀಸರಿಂದ ಚಾಲಕನಿಗೆ ಬಿತ್ತು ದಂಡ
ಸುಂಟಿಕೊಪ್ಪ: ಸಾಮಾಜಿಕ ಜಾಲತಾಣದಲ್ಲಿ ಬಂದ ವಿಡಿಯೋವೊಂದನ್ನು ಪರಿಶೀಲಿಸಿದ ಸುಂಟಿಕೊಪ್ಪ ಪೊಲೀಸರು ಅಪಾಯಕಾರಿಯಾಗಿ ಕಾರು ಚಲಾಯಿಸಿದ ಚಾಲಕನಿಗೆ 2000 ರೂ. ದಂಡ ವಿಧಿಸಿದ್ದಾರೆ.
ವಿಡಿಯೋದಲ್ಲಿ ಸ್ಕೋಡ ಕಾರನ್ನು ದುಡುಕಿನಿಂದ ಮತ್ತು ನಿರ್ಲಕ್ಷ್ಯದಿಂದ ಚಾಲಿಸುತ್ತಾ, ಇತರ ವಾಹನಗಳಿಗೆ ಸಂಚಾರಕ್ಕೆ ತೊಂದರೆ ಮಾಡುತ್ತಾ, ಯಾವುದೇ ಸಂಚಾರಿ ಶಿಸ್ತು ಪಾಲಿಸದೆ ಚಾಲನೆ ಮಾಡುತ್ತಿದ್ದುದು ಕಂಡುಬಂದಿತ್ತು.
ಪೊಲೀಸರು ಚಾಲಕನ ವಿರುದ್ಧ ಈ ಕೆಳಗಿನ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ:LAW DISCLI (RPF 500),RECKLESS/DANGEROUS DRIVING - N MV ACT (1000),OBSTRUCTING TRAFFIC (500) ಬೆಂಗಳೂರು ಯಲಹಂಕ ಮೂಲದ ಚಾಲಕನಿಗೆ ನಗದು ರೂಪದಲ್ಲಿ ದಂಡ ವಿಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್, ಸುಂಟಿಕೊಪ್ಪ ಪೊಲೀಸ್ ಠಾಣೆ ತಿಳಿಸಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
