ಪಾಲಿಬೆಟ್ಟ; ಯಂಗ್ ಇಂಡಿಯಾ ನೂತನ‌ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

Feb 9, 2026 - 12:08
 0  286
ಪಾಲಿಬೆಟ್ಟ; ಯಂಗ್ ಇಂಡಿಯಾ ನೂತನ‌ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

ಪಾಲಿಬೆಟ್ಟ; ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಯೂತ್ ಕ್ಲಬ್ ಕಟ್ಟಡದ ಭೂಮಿ ಪೂಜೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಶುಭ ಕೋರಿದ ಶಾಸಕರು, ಯುವಕರಲ್ಲಿ ಕ್ರೀಡಾ ಮನೋಭಾವ ಹಾಗೂ ಸಾಮಾಜಿಕ ಚಿಂತನೆ ಇರುವುದು ಸಂತೋಷದ ವಿಷಯ. ಯೂತ್ ಕ್ಲಬ್ ಕಟ್ಟಡವು ಅತಿ ಶೀಘ್ರದಲ್ಲಿ ಪೂರ್ಣಗೊಂಡು ಈ ಭಾಗದ ಕ್ರೀಡೆಗೆ ಹೆಚ್ಚಿನ ಅವಕಾಶ ಒದಗುವಂತಾಗಲಿ ಎಂದು ಶುಭ ಕೋರಿದರು.

 ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡೀರ ಅರುಣ್ ಮಾಚಯ್ಯ, ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷರು ಶ ಸಾಬು ಕಾಳಪ್ಪ, ಸಂಘದ ಅಧ್ಯಕ್ಷಾದ ಪಿ ಎ ಸಲೀಂ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರಾದ ರಫೀಕ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಣೇಶ್, ಪಂಚಾಯಿತಿ ಸದಸ್ಯರು ಅಬ್ದುಲ್ ನಾಸಿರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೂಕಂಡ ವಿಜು ಸುಬ್ರಮಣಿ, ಆಶಾ ಜೇಮ್ಸ್ ಮಾಜಿ ತಾಲೂಕು ಪಂಚಾಯ್ತಿ ಸದಸ್ಯೆ, ಮತೀನ್ ಪ್ರಚಾರ ಸಮಿತಿ ಅಧ್ಯಕ್ಷರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಜೆ ಕೆ ಸೋಮಣ್ಣ, ವೆಂಕಟೇಶ್ ಗ್ರಾಮ ಪಂಚಾಯ್ತಿ ಸದಸ್ಯರು, ಥೆರೇಸಾ ವಿಕ್ಟರ್, ವೆಟಿರೀರ ವಿನು ಸೋಮಣ್ಣ ಕಲ್ಚರಲ್ ಕ್ಲಬ್, ಲಿಜೇಶ್ ಮಿಲಾನ್ಸ್ ಅಮ್ಮತಿ, ಜೈನುದ್ದೀನ್ ಜಮ ಅತ್ ಕಮ್ಮಿಟ್ಟಿ ಉಪಾಧ್ಯಕ್ಷರು,ಅಬೂಬಕರ್ ಇಂಡಿಯನ್ ಸ್ಟೋರ್, ಮುಸ್ತಫಾ ಉದ್ಯಮಿ ಪಾಲಿಬೆಟ್ಟ, ಕುಟ್ಟಂಡ ದೇಚಿ, ಮಾದೇವ, ಕುಂಡಚ್ಚಿರ ಮಂಜು ದೇವಯ್ಯ, ಅಯೂಬ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0