Kodagu

ರಾಜ್ಯದ ನಂ.01 ಎಫ್‌ಪಿಓ ಆಗಿ ಪೊನ್ನಾಡ್ ಆಯ್ಕೆ

admincoorgdaily

ರಾಜ್ಯದ ನಂ.01 ಎಫ್‌ಪಿಓ ಆಗಿ ಪೊನ್ನಾಡ್ ಆಯ್ಕೆ

ಮಡಿಕೇರಿ: ಪೊನ್ನಾಡ್ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಕರ್ನಾಟಕದ ನಂ.೧ ಎಫ್‌ಪಿಓ ಆಗಿ ಹೊರಹೊಮ್ಮಿದೆ ಎಂದು ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದರು. ಕರ್ನಾಟಕ ಸರ್ಕಾರದ ಎಫ್‌ಪಿಓ ಶ್ರೇಷ್ಠತಾ ಕೇಂದ್ರದ ೯ನೇ ಸಂಸ್ಥಾಪನಾ ದಿನದಂದು ಪ್ರತಿಷ್ಠಿತ ಔಟ್‌ಪುಟ್ ಎಕ್ಸಲೆನ್ಸ್ ಪ್ರಶಸ್ತಿ ನೀಡಲಾಗಿದೆ.

ಮೂರು ಹಂತದ ಮೌಲ್ಯಮಾಪನದಲ್ಲಿ ರಾಜ್ಯದ ಹಲವು ಎಫ್‌ಪಿಒಗಳನ್ನು ಹಿಂದಿಕ್ಕಿ ಪೊನ್ನಾಡ್ ಪ್ರಥಮ ಸ್ಥಾನ ಪಡೆದಿದೆ. ೨೦೨೧ರಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಆರಂಭವಾದ ಸಂಸ್ಥೆ ಈಶಾ ಔಟ್ರೀಚ್ ಮಾರ್ಗದರ್ಶನದಲ್ಲಿ ಬೆಳೆದಿದೆ. ೩೧೦ರಿಂದ ೭೫೦ ಷೇರುದಾರರಿಗೆ ವಿಸ್ತರಣೆಯಾಗಿದ್ದು, ೨೦೨೫-೨೬ರಲ್ಲಿ ರೂ.೧೫ ಕೋಟಿ ವಹಿವಾಟು ಸಾಧಿಸಿದೆ. ಕಾಫಿ, ಕಾಳುಮೆಣಸು, ಏಲಕ್ಕಿ ಮಾರುಕಟ್ಟೆ, ಉಚಿತ ಮಣ್ಣು ಪರೀಕ್ಷೆ ಮೂಲಕ ರೈತರಿಗೆ ನೆರವಾಗುತ್ತಿದೆ. ಈ ಹಿಂದೆ ಸಿಐಐ, ಕೃಷಿ ಜಾಗರಣ್ ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈಶಾ ಔಟ್ರಿಚ್‌ನ ಪ್ರತಿನಿಧಿ ವಿಶ್ವನಾಥ್, ಪೊನ್ನಾಡ್ ರೈತ ಉತ್ಪಾದಕ ಕಂಪನಿ ಲಿಮಿಟೆಡ್‌ನ ನಿರ್ದೇಶಕರಾದ ಕೆ.ಎಂ.ಉಮೇಶ್, ಕೆ.ರತ್ನಚರ್ಮಣ್ಣ, ಕೆ.ಜಿ.ಅಜಿತ್ ನಾಣಯ್ಯ ಇದ್ದರು.