ಪೊನ್ನಂಪೇಟೆ:ಹುದೂರು ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ
ಪೊನ್ನಂಪೇಟೆ:79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುದೂರುವಿನಲ್ಲಿ ಸಮೃದ್ಧಿ ಪುರುಷರ ಸಂಘ ಹಳ್ಳಿಗಟ್ಟು ಇವರ ಸಮ್ಮುಖದಲ್ಲಿ,ಶಾಲಾ ಮುಖ್ಯೋಪಾಧ್ಯಯರಾದ ಕಾವೇರಿ ವೈ ಎನ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನದ ಬಗ್ಗೆ ಮಾತನಾಡಿದರು. ಸಮೃದ್ಧಿ ಪುರುಷರ ಸ್ವ-ಸಹಾಯ ಸಂಘದ ಅಧ್ಯಕ್ಷರು ಹರೀಶ್. ಬಿ.ವಿ ಹಾಗೂ ಸರ್ವ ಸದಸ್ಯರು ಸೇರಿ, ಸಿಹಿ ತಿನಿಸುಗಳನ್ನು ನೀಡಿದರು.