ಪೊನ್ನಂಪೇಟೆ ವಕೀಲ ಸಂಘದಿಂದ ಎ.ಎಸ್.ಪೊನ್ನಣ್ಣ ನವರಿಗೆ ಧನ್ಯವಾದ ಸಮರ್ಪಣೆ
admincoorgdaily

ಮಡಿಕೇರಿ; ಪೊನ್ನಂಪೇಟೆ ನ್ಯಾಯಾಲಕ್ಕೆ ಶಾಶ್ವತ ಸಿವಿಲ್ ಸೀನಿಯರ್ ಜಡ್ಜ್ ನ್ಯಾಯಾಲಯ ಸೌಲಭ್ಯ ಒದಗಿಸಿದ ಹಿನ್ನಲೆಯಲ್ಲಿ ಸಹಕಾರ ನೀಡಿದ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರಿಗೆ ಪೊನ್ನಂಪೇಟೆ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಧನ್ಯವಾದ ಸಮರ್ಪಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಎಂ.ಜಿ.ರಾಕೇಶ್, ಪದಾಧಿಕಾರಿಗಳಾದ ಗಿರೀಶ್,ಎಂ.ಸಿ.ಪೂವಣ್ಣ ,ಸುರೇಶ್ ಅಯ್ಯಪ್ಪ, ಎಸ್.ವಿ.ಸುರೇಶ್ ರವರು ವಿಧಾನ ಸೌಧದಲ್ಲಿರುವ ಎ.ಎಸ್.ಪೊನ್ನಣ್ಣ ನವರ ಕಛೇರಿಯಲ್ಲಿ ಭೇಟಿ ಮಾಡಿ ಧನ್ಯವಾದ ಹೇಳಿ ಪೊನ್ನಂಪೇಟೆ ನ್ಯಾಯಾಲಕ್ಕೆ ಡಿಜಿಟಲ್ ಲೈಬ್ರರಿ ಯನ್ನು ವ್ಯವಸ್ಥೆ ಮಾಡುವಂತೆ ಕೋರಿಕೆ ಸಲ್ಲಿಸಿದರು.