ಪೊನ್ನಂಪೇಟೆ:ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು: ಕಾರು ಚಾಲಕನಿಗೆ 6 ತಿಂಗಳ ಜೈಲು, 11 ಸಾವಿರ ದಂಡ

Jul 17, 2026 - 12:58
Jul 17, 2026 - 12:59
 0  590
ಪೊನ್ನಂಪೇಟೆ:ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು: ಕಾರು ಚಾಲಕನಿಗೆ 6 ತಿಂಗಳ ಜೈಲು, 11 ಸಾವಿರ ದಂಡ

ಪೊನ್ನಂಪೇಟೆ: ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಪೊನ್ನಂಪೇಟೆ ನ್ಯಾಯಾಲಯ ಕಾರು ಚಾಲಕನಿಗೆ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 11 ಸಾವಿರ ರೂಪಾಯಿ ದಂಡ ವಿಧಿಸಿದೆ. 22-11-2023, ಬೆಳಿಗ್ಗೆ 10.30 ಬಾಳೆಲೆ ಕಡೆಯಿಂದ ಪೊನ್ನಂಪೇಟೆ ಕಡೆಗೆ ವ್ಯಾಗನರ್ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಬೋಸ್ ಮಂದಣ್ಣ ಅವರು, ಎದುರಿನಿಂದ ಬರುತ್ತಿದ್ದ ಶಿಕುಮಾರ್ ಅವರ ಯಮಹಾ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು.

 ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಶಿಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣದ ತನಿಖೆ ನಡೆಸಿದ ಪೊನ್ನಂಪೇಟೆ ಪೊಲೀಸ್ ಠಾಣೆಯ ಗೋವಿಂದರಾಜು ಎಂ.ವಿ ಅವರು ಆರೋಪಿಯ ವಿರುದ್ಧ IPC 279 ಮತ್ತು 304(ಎ)‌ಅಡಿಯಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

 ವಿಚಾರಣೆ ನಡೆಸಿದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶ್ರೀನಾಥ್ ಎ. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಲಂ 304(ಎ): 6 ತಿಂಗಳ ಸಾದಾ ಕಾರಾಗೃಹ 10,000 ರೂ ದಂಡ ಕಲಂ 279 1,000 ರೂ ದಂಡ ದಂಡ ಪಾವತಿಸದಿದ್ದರೆ 15 ದಿನ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರತ್ನಾಕರ್ ವಾದ ಮಂಡಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0