ಪೊನ್ನಂಪೇಟೆ:ಮಾಜಿ ಬಿಎಸ್‌ಎನ್‌ಎಲ್ ನೌಕರನಿಂದ ಪ್ರಧಾನಿ ನರೇಂದ್ರ ಮೋದಿ ನಿಂದನೆ,ದೂರು ದಾಖಲು
admincoorgdaily

ಪೊನ್ನಂಪೇಟೆ, ಜು.3: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೌರವಕ್ಕೆ ಧಕ್ಕೆ ತಂದಿರುವ ಬಗ್ಗೆ ಪೊನ್ನಂಪೇಟೆ-ವಿರಾಜಪೇಟೆ ಬಿ.ಜೆ.ಪಿ. ಮಂಡಲ ಕಾರ್ಯದರ್ಶಿ ಕೆ.ಬಿ ಉತ್ತಪ್ಪ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪೊನ್ನಂಪೇಟೆ ತಾಲೂಕು ನಾಯರ್ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಬಿ.ಎಸ್.ಎನ್.ಎಲ್ ನಿವೃತ್ತ ನೌಕರ ಪವಿತ್ರನ್ ಅವರು ಪ್ರಧಾನಿ ಮೋದಿ ಅವರನ್ನು 'ನಾಲಾಯಕ್ ಸೂಳೆಮಗ' ಎಂಬ ಪದಗಳಿಂದ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
"ಇದರಿಂದ ಮಾನ್ಯ ಪ್ರಧಾನಿಯವರ ಗೌರವಕ್ಕೆ ಧಕ್ಕೆ ಹಾಗೂ ಮಾನ ಹಾನಿ ಉಂಟುಮಾಡಿರುತ್ತಾರೆ. ಆದ್ದರಿಂದ ತಾವುಗಳು ಸದರಿ ಪವಿತ್ರನ್ ರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ" ಎಂದು ಬಿಜೆಪಿ ಮಂಡಲ ಕಾರ್ಯದರ್ಶಿ 03/07/2026ರಂದು ಸಲ್ಲಿಸಿದ ದೂರಿನಲ್ಲಿ ಕೋರಿದ್ದಾರೆ.