Kodagu

ಪೊನ್ನಂಪೇಟೆ; ಕೆರೆಯಲ್ಲಿ ಮುಳುಗಿ ಬಾಲಕಿ ಸಾವು

admincoorgdaily

ಪೊನ್ನಂಪೇಟೆ; ಕೆರೆಯಲ್ಲಿ ಮುಳುಗಿ ಬಾಲಕಿ ಸಾವು

ಪೊನ್ನಂಪೇಟೆ, ಏ. 27:: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನಪ್ಪಿದ ದುರ್ಘಟನೆ ಪೊನ್ನಂಪೇಟೆ ತಾಲೂಕಿನ ಹಾತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

 ಹಾತೂರು ಗ್ರಾಮದ ಕೊಂಗoಡ ಕುಟ್ಟಪ್ಪ, ದಿವ್ಯಾ ದಂಪತಿಯ ಪುತ್ರಿ, 8ನೇ ತರಗತಿ ವಿದ್ಯಾರ್ಥಿನಿ ಕೊಂಗೆಪಂಡ ಸಾನ್ವಿ (13) ಮೃತದುರ್ದೈವಿ. ತಾ. 25 ರಂದು ಸಂಜೆ ಮನೆಯ ಹೂದೋಟದಲ್ಲಿ ಗಿಡಗಳಿಗೆ ತಾಯಿಯೊಂದಿಗೆ ನೀರು ಹಾಕುತ್ತಿದ್ದು ,ನಂತರದ ಕೆಲ ಕ್ಷಣದಲ್ಲಿ ಸಾನ್ವಿ ಕಾಣೆಯಾಗಿದ್ದಳು.

 ಮನೆಯವರು ಹುಡುಕಿದಾಗ ಮನೆಯ ಸಮೀಪದಲ್ಲಿದ್ದ ಕೆರೆಯಲ್ಲಿ ಮುಳುಗಿ ಸಾವನಪ್ಪಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿರು ಮುಂದಿನ ಕ್ರಮಕೈಗೊಂಡಿದ್ದಾರೆ.