ಪೊನ್ನಂಪೇಟೆ: ಕೋಣಗೇರಿ ನೂತನ ವಿದ್ಯುತ್ ಮಾರ್ಗ ಲೋಕಾರ್ಪಣೆ

Dec 3, 2025 - 16:54
 0  19
ಪೊನ್ನಂಪೇಟೆ: ಕೋಣಗೇರಿ ನೂತನ ವಿದ್ಯುತ್ ಮಾರ್ಗ ಲೋಕಾರ್ಪಣೆ

ಪೊನ್ನಂಪೇಟೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಕೋಣಗೇರಿ ಶಾಲೆ ಜಂಕ್ಷನ್ ನಿಂದ ಅಂಗನವಾಡಿ ವರೆಗಿನ ಪೂರ್ಣಗೊಂಡಿರುವ 11 ಕೆವಿ ವಿದ್ಯುತ್ ಮಾರ್ಗದ ರೀ ರೂಟಿಂಗ್ ಹಾಗೂ ರೀ ಕಂಡಕ್ಟರಿಂಗ್ ರೂ 8.87ಲಕ್ಷ ಕಾಮಗಾರಿಯ ಲೋಕಾರ್ಪಣೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ನೂತನ ಮಾರ್ಗ ಅಳವಡಿಕೆಯಿಂದ ಹಾಗೂ ಬದಲಿ ವಿದ್ಯುತ್ ಮಾರ್ಗದ ಉಪಕರಣಗಳನ್ನು ಅಳವಡಿಸಿರುವುದರಿಂದ ಇನ್ನೂ ಈ ಭಾಗದ ಜನರು ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ನಿರೀಕ್ಷಿಸಬಹುದು. ವಿಶೇಷವಾಗಿ ರೈತರು ಹಾಗೂ ವಿದ್ಯುತ್ ಬಳಕೆದಾರರು ಮತ್ತು ವಿದ್ಯಾರ್ಥಿಗಳ ಓದಿಗೆ ಯಾವುದೇ ರೀತಿಯಾದ ತೊಂದರೆ ಆಗಬಾರದೆಂದು ಗುಣಮಟ್ಟದ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಜನಪರವಾದ ಯಾವುದೇ ಕೆಲಸಗಳ ಬಗ್ಗೆ ತನ್ನ ಗಮನಕ್ಕೆ ತಂದಲ್ಲಿ, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮ ವಹಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಮೀದೇರಿರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಹಿರಿಯರು ಮುಕಳೆರ ಕುಶಾಲಪ್ಪ, ಪೆಮ್ಮಂಡ ಪೊನ್ನಪ್ಪ, ವಾಸು ಕುಟ್ಟಪ್ಪ, ಸುಧೀರ್, ಅಜ್ಜಿಕುಟ್ಟಿರ ಗಿರೀಶ್, ಪೊನ್ನು, ಪಮು, ಸುರೇಂದ್ರ, ಯೋಗೇಶ್, ರಂಜು ,ಶಿವು ನಾಚಪ್ಪ, ರೋನಿ , ಅಣ್ಣಳ್ಳಮಾಡ ಗಿರೀಶ್, ಕುಂಡಚ್ಚಿರ ಮಂಜು ದೇವಯ್ಯ, ರಶೀದ್, ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0