ಪೊನ್ನಂಪೇಟೆ: ಹುದೂರು ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Aug 16, 2026 - 11:30
 0  51
ಪೊನ್ನಂಪೇಟೆ: ಹುದೂರು ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪೊನ್ನಂಪೇಟೆ: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುದೂರುವಿನಲ್ಲಿ, ಶಾಲಾ ಅಭಿವೃದ್ಧಿ ಮಂಡಳಿ, ಹಳೆಯ ವಿದ್ಯಾರ್ಥಿ ಸಂಘ ಹಾಗೂ ಸಮೃದ್ಧಿ ಪುರುಷರ ಸಂಘ, ಶಿಕ್ಷಕರ ವೃಂದ ದವರು, ಪೋಷಕರ ಸಮ್ಮುಖದಲ್ಲಿ, ಸಮೃದ್ಧಿ ಸಂಘದ ಅಧ್ಯಕ್ಷರು ಅಬ್ದುಲ್ಲ, ಶಾಲಾ ಮುಖ್ಯ ಉಪಾಧ್ಯಾಯರು ಫಿಲೂಮಿನ ಮೇಡಂ,ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸೋಮಯ್ಯ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು.

 ನಂತರ ಸಮೃದ್ಧಿ ಪುರುಷರ ಸ್ವ -ಸಹಾಯ ಸಂಘದಿಂದ ಸಿಹಿಯನ್ನು ಹಂಚಿದರು. ದೇಶದ ಹಿತಕ್ಕಾಗಿ ಸತ್ಯ ಪ್ರತಿಜ್ಞೆಯನ್ನು ನೆರವೇರಿಸಿ,ಬೆಟ್ಟ ಕುರುಬರ ಸಮಿತಿಯಿಂದ ಅಧ್ಯಕ್ಷರು ದಿನೇಶ್ ಅವರು, ಸಿಹಿಯನ್ನು ಹಂಚಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ, ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಸಭಾ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಸ ಖಲೀಲ್ ರವರು ಭೋಜನ ವ್ಯವಸ್ಥೆಯನ್ನು ಏರ್ಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0