ಪೊನ್ನಂಪೇಟೆ;ಬಾಳೆಲೆಯ ದೇವನೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದ ಪ್ರತಿಷ್ಠಾ-ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಾರಿಗೆ ಸಚಿವರಿಗೆ ಆಹ್ವಾನ

Feb 12, 2026 - 17:11
 0  178
ಪೊನ್ನಂಪೇಟೆ;ಬಾಳೆಲೆಯ ದೇವನೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದ ಪ್ರತಿಷ್ಠಾ-ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಾರಿಗೆ ಸಚಿವರಿಗೆ ಆಹ್ವಾನ

ಗೋಣಿಕೊಪ್ಪ: ಪೊನ್ನಂಪೇಟೆ ತಾಲ್ಲೂಕು ಬಾಳೆಲೆಯ ದೇವನೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದ ಪ್ರತಿಷ್ಠಾ-ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆಬ್ರವರಿ 22ರಿಂದ 25ರವರೆಗೆ ನಡೆಯಲಿದೆ ಎಂದು ಕೊಡಗು ಜಿಲ್ಲಾ ಪಂಚಾಯತಿ ಸದಸ್ಯರು ಕೊಡಗು ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷರಾದ ಬಾನಂಡ ಪ್ರತ್ಯು ಮಾಹಿತಿ ನೀಡಿದ್ದಾರೆ.

25ರಂದು ನಡೆಯುವ ಸಮಾರಂಭಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಜಿಲ್ಲಾ ಉಸ್ತುವಾರಿ ಹಾಗು ಸಣ್ಣ ನೀರಾವರಿ ಸಚಿವ ಬೋಸರಾಜು, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹಾಗು ಕೊಡಗು ಜಿಲ್ಲಾ ಪಂಚಾಯತಿ ಸದಸ್ಯರು ಕೊಡಗು ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಬಾನಂಡ ಪ್ರತ್ಯು, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಉಸ್ತುವಾರಿ ಆದೇಂಗಡ ವಾಸು ಬೆಳ್ಯಪ್ಪ, ಆದೇಂಗಡ ಚಿಟ್ಟಿ ರಮೇಶ್ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದ್ದಾರೆ.

ಆಹ್ವಾನ ಪತ್ರಿಕೆಯನ್ನು ಈಗಾಗಲೇ ಸಚಿವರುಗಳಿಗೆ ತಲುಪಿಸಿದ್ದು, ಈ ಸಂದರ್ಭದಲ್ಲಿ ಸಚಿವರಿಗೆ ಶಾಸಕ ಎ.ಎಸ್ ಪೊನ್ನಣ್ಣ ಕಾವೇರಿ ತಾಯಿಯ ಮೂರ್ತಿಯನ್ನು ಉಡುಗೊರೆಯಾಗಿ ನೀಡಿ ಉತ್ಸವಕ್ಕೆ ಬರುವಂತೆ ಆಹ್ವಾನ ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0