ಪೊನ್ನಂಪೇಟೆ: ಪೆಮ್ಮಂಡ ಕುಟುಂಬಸ್ಥರು ಆಯೋಜಿಸಿದ ಮೊದಲನೇ ವರ್ಷದ ತೋಕ್ ನಮ್ಮೆಯಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ: ಪೆಮ್ಮಂಡ ಕುಟುಂಬಸ್ಥರು ಆಯೋಜಿಸಿದ, ಮೊದಲನೆಯ ವರ್ಷದ ತೋಕ್ ನಮ್ಮೆ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ರವರು ಹಾಗೂ ಶಾಸಕರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ರವರು ಭಾಗವಹಿಸಿದರು.
ಪೊನಂಪೇಟೆಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ಈ ಕಾರ್ಯಕ್ರಮವು ಜರುಗಿತ್ತು. ಬಂದೂಕು ಚಲಾಯಿಸುವುದರಲ್ಲಿ ಹಾಗೂ ಗುರಿಯಲ್ಲಿ ಮುಂಚೂಣಿಯಲ್ಲಿರುವ ಕೊಡಗಿನ ಜನತೆ, ಈ ಕ್ರೀಡೆಯೊಂದಿಗೆ ಮನರಂಜನೆ ಪಡೆಯುವುದರೊಂದಿಗೆ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವಂಥಾಗಿದೆ ಎಂದು ಶಾಸಕರು ಬಣ್ಣಿಸಿದರು. ಶಾಸಕರು ಸಹ ಅತಿಥಿಯಾಗಿ ಹಬ್ಬದಲ್ಲಿ ಭಾಗವಹಿಸಿ ಬಂದೂಕಿನಲ್ಲಿ ತಮ್ಮ ಕೈಚಳಕವನ್ನು ತೋರಿಸಿ ಜನರಿಂದ ಶಭಾಷ್ ಗಿರಿ ಪಡೆದರು.
ಪ್ರಪ್ರಥಮ ಬಾರಿಗೆ ತೋಕ್ ನಮ್ಮೆ ಕಾರ್ಯಕ್ರಮ ಆಯೋಜಿಸಿದ ಪಮ್ಮಂಡ ಕುಟುಂಬಸ್ಥರನ್ನು ಅಭಿನಂದಿಸಿದ ಶಾಸಕರು, ಈ ಸಂಪ್ರದಾಯ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಪೆಮ್ಮಂಡ ಕೆ ಪೊನ್ನಪ್ಪ, ಅರುಣ,ಅಖಿಲ ಕೊಡವ ಸಮಾಜದ ಅಧ್ಯಕ್ಷರು ಪರದಂಡ ಸುಬ್ರಮಣಿ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷರು ನಂದಿನೇರವಂಡ ನಾಚಪ್ಪ, ಪೆಮ್ಮಂಡ ರಾಜ, ಪೆಮ್ಮಂಡ ಸುಬ್ರಮಣಿ, ಪೆಮ್ಮಂಡ ಮಂಜು ಬೋಪಣ್ಣ, ಹಾಗೂ ಪೆಮ್ಮಂಡ ಕುಟುಂಬಸ್ಥರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.