ಪೊನ್ನಂಪೇಟೆ:ಅಶ್ಲೀಲ ಫೋಟೋ ವೈರಲ್ ಬೆದರಿಕೆ ಕೇಸ್:ಒಂದು ವರ್ಷ ಶಿಕ್ಷೆ ಪ್ರಕಟ
ಪೊನ್ನಂಪೇಟೆ: ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್ ಮೂಲಕ ಮಹಿಳೆಗೆ ಹಣಕ್ಕಾಗಿ ಬೆದರಿಕೆ ಹಾಕಿ, ಅಶ್ಲೀಲ ಭಾವಚಿತ್ರ ಹಾಗೂ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಆರೋಪಿಗೆ ಪೊನ್ನಂಪೇಟೆ ನ್ಯಾಯಾಲಯ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
2023ರ ಮೇ 7ರಿಂದ ಜೂನ್ 21ರವರೆಗೆ ಕಾನೂರು ಜಂಕ್ಷನ್ನಲ್ಲಿ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದ್ದ ದೂರದಾರ ದೇಚಮ್ಮ ಅವರಿಗೆ ಆರೋಪಿ ನೌಷದ್ ಪಿ.ಎ. ಎಂಬಾತ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ. ಹಣ ನೀಡದಿದ್ದರೆ ದೂರದಾರೆಯ ಭಾವಚಿತ್ರ ಮತ್ತು ವಿಡಿಯೋವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ. ಜೊತೆಗೆ ದೂರದಾರೆಯ ಪತಿಯ ಫೇಸ್ಬುಕ್ ಖಾತೆಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿ ಹಣಕ್ಕಾಗಿ ಒತ್ತಾಯಿಸಿದ್ದ.
ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಶ್ರೀನಾಥ್ ಎ. ಅವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಕಲಂ 354(ಡಿ), 506, 509: ತಲಾ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ತಲಾ 3,000 ರೂ - ಒಟ್ಟು 6,000 ರೂ ದಂಡ, ದಂಡ ಪಾವತಿಸದಿದ್ದರೆ 1 ತಿಂಗಳು ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ಪ್ರಕಟಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪೊನ್ನಂಪೇಟೆ ಪೊಲೀಸ್ ಠಾಣೆಯ ಪ್ರಮೀಳಾ ವಿ.ಆರ್ ನಡೆಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರತ್ನಾಕರ್ ವಾದ ಮಂಡಿಸಿದ್ದರು. --
What's Your Reaction?
Like
0
Dislike
0
Love
1
Funny
1
Angry
0
Sad
1
Wow
0
