ಪೊನ್ನಂಪೇಟೆ; ಮಲ್ಲಿಕಾರ್ಜನ ಖರ್ಗೆ ವಿರುದ್ಧ ಪೋಸ್ಟ್ , ಮಹಿಳೆಯ ವಿಚಾರಣೆ

Apr 24, 2026 - 12:55
 0  842
ಪೊನ್ನಂಪೇಟೆ; ಮಲ್ಲಿಕಾರ್ಜನ ಖರ್ಗೆ ವಿರುದ್ಧ ಪೋಸ್ಟ್ , ಮಹಿಳೆಯ ವಿಚಾರಣೆ
ಖರ್ಗೆ

ಪೊನ್ನಂಪೇಟೆ, ಏ. 23: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ ಹೇಳಿಕೆಯನ್ನು ಖಂಡಿಸಿ ಫೇಸ್‌ ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪೊನ್ನಂಪೇಟೆ ನಿವಾಸಿ, ಹಿಂದೂ ಪರ ಸಂಘಟನೆ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಮಂಜುಳಾ ಮಣಿಕಂಠ ಎಂಬವರನ್ನು ನಿನ್ನೆ ಪೊನ್ನಂಪೇಟೆ ಪೊಲೀಸ್ ಠಾಣೆಗೆ ಕರೆಸಿಕೊಂಡು ಸಂದೇಶ ಹಂಚಿಕೊಂಡ ಬಗ್ಗೆ ವಿವರ ಪಡೆದು ವಿಚಾರಣೆ ಮಾಡಿ ಕಳುಹಿಸಿದ್ದಾರೆ.

ಈ ವಿಚಾರವನ್ನು ತೀವ್ರ ಖಂಡಿಸಿರುವ ಹಿಂದೂ ಪರ ಸಂಘಟನೆಗಳು, ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರಿದೆ. ಸಂಜೆ 6 ಗಂಟೆಯ ನಂತರ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿರುವುದಕ್ಕೆ ಮಂಜುಳಾ ಮಣಿಕಂಠ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಸ್ವತಃ ಅವರೇ ಫೇಸ್‌ಬುಕ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 1
Angry Angry 0
Sad Sad 1
Wow Wow 0