ಪೊನ್ನಂಪೇಟೆ: ಹೈಸೊಡ್ಲೂರಿನಲ್ಲಿ ನೂತನ ವಿದ್ಯುತ್ ಮಾರ್ಗ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

Dec 3, 2025 - 14:00
 0  279
ಪೊನ್ನಂಪೇಟೆ: ಹೈಸೊಡ್ಲೂರಿನಲ್ಲಿ ನೂತನ ವಿದ್ಯುತ್ ಮಾರ್ಗ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಹೈಸೊಡ್ಲೂರು ಗ್ರಾಮದ ಮಾದೇಶ್ವರ ದೇವಸ್ಥಾನದಿಂದ ಐಗುಂದ ಎಸ್ಟೇಟ್ ವರೆಗಿನ ಪೂರ್ಣಗೊಂಡಿರುವ 11 ಕೆವಿ ವಿದ್ಯುತ್ ಮಾರ್ಗದ ರೀ ರೂಟಿಂಗ್ ಹಾಗೂ ರೀ ಕಂಡಕ್ಟರಿಂಗ್ ರೂ 14.71ಲಕ್ಷ ರೂ ಕಾಮಗಾರಿಯ ಉದ್ಘಾಟನೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

 ಮಾತನಾಡಿದ ಶಾಸಕರು, ಪ್ರಮುಖವಾಗಿ ಕೃಷಿ ಅವಲಂಬಿತ ಕೊಡಗಿನ ಜನತೆಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಕ್ಷೇತ್ರದಾದ್ಯಂತ ಇಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ರೈತರ ಕಡೆಯಿಂದ ಮೆಚ್ಚುಗೆಯ ಸಂದೇಶಗಳು ಬರುತ್ತಿವೆ. ನಾಡಿನ ರೈತರ ಹಾಗೂ ವಿದ್ಯುತ್ ಬಳಕೆದಾರರ ಹಿತ ದೃಷ್ಟಿಯಿಂದ ಈ ಯೋಜನೆ ತಂದಿದ್ದು ಇದರ ಸದುಪಯೋಗವನ್ನು ನಾಡಿನ ಜನತೆ ಪಡೆದುಕೊಳ್ಳಬೇಕೆಂದು ಮಾನ್ಯ ಶಾಸಕರು ಕರೆ ನೀಡಿದರು.

 ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಮೀದೇರಿರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಹಿರಿಯರು ಮುಕಳೆರ ಕುಶಾಲಪ್ಪ, ಪೆಮ್ಮಂಡ ಪೊನ್ನಪ್ಪ, ಸುಧೀರ್, ಅಜ್ಜಿಕುಟ್ಟಿರ ಗಿರೀಶ್, ಪಮು, ಸುರೇಂದ್ರ, ಯೋಗೇಶ್, ರಂಜು ,ಶಿವು ನಾಚಪ್ಪ, ರೋನಿ ,ಉದಯ, ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0