ಪೊನ್ನಪ್ಪಸಂತೆ-ಬಾಳಲೆ ರಸ್ತೆ ಅಭಿವೃದ್ಧಿಗೆ ಚಾಲನೆ: ₹2.30 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ

Jun 19, 2026 - 14:55
 0  150
ಪೊನ್ನಪ್ಪಸಂತೆ-ಬಾಳಲೆ ರಸ್ತೆ ಅಭಿವೃದ್ಧಿಗೆ ಚಾಲನೆ: ₹2.30 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ

ಪೊನ್ನಂಪೇಟೆ, ಜೂನ್ 19*: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಪೊನ್ನಪ್ಪಸಂತೆಯಿಂದ ಬಾಳಲೆಗೆ ಸಂಪರ್ಕಿಸುವ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.

 ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಪೂಜೆ ನೆರವೇರಿಸಿದರು. ₹2 ಕೋಟಿ 30 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕರು ತಿಳಿಸಿದರು. ರಸ್ತೆ ಅಭಿವೃದ್ಧಿಯಿಂದ ಪೊನ್ನಪ್ಪಸಂತೆ-ಬಾಳಲೆ ಭಾಗದ ರೈತರು, ಸ್ಥಳೀಯ ನಿವಾಸಿಗಳು  ಅನುಕೂಲವಾಗಲಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರಾದ ಟಾಟು ಮೊಣ್ಣಪ್ಪ, ವಲಯ ಅಧ್ಯಕ್ಷರಾದ ಚೆಟ್ಟಿಮಾಡ ರೋಬಿನ್, ಹಿರಿಯರಾದ ಮುಕಳೇರ ಕುಶಾಲಪ್ಪ, ಜಿಮ್ಮಿ ಅಯ್ಯಣ್ಣ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಂಡ ಧ್ಯಾನ್ ದೇವಯ್ಯ, ಕೊಣ್ಣಿಯಂಡ ಸೋಮಣ್ಣ, ಬಾಳಲೆ ವಲಯ ಅಧ್ಯಕ್ಷರಾದ ಕೋದಂಡ ಸೋಮಣ್ಣ, ನಲ್ಲೂರು ಬೂತ್ ಅಧ್ಯಕ್ಷರಾದ ಬೋಡಂಗಡ ಅಶೋಕ್, ಬೂತ್ ಅಧ್ಯಕ್ಷರಾದ ಪುಳ್ಳಂಗಡ ದಿನೇಶ್, ಅರಮಾಣಮಾಡ ಕುಶ, ಪಕ್ಷದ ಮುಖಂಡರಾದ ವಿನು ಉತ್ತಪ್ಪ, ಮಚ್ಚಾಮಾಡ ಮನು, ಅಣ್ಣಳ್ಳಮಾಡ ಹರೀಶ್, ಗಿರೀಶ್, ಅಜ್ಜಿಕುಟ್ಟಿರ ಪೊನ್ನಪ್ಪ, ಕೇಚಮಾಡ ಸಿದ್ದು ನಾಚಪ್ಪ, ಕುಂಡಚ್ಚಿರ ಮಂಜು ದೇವಯ್ಯ, ತಾಣಚ್ಚಿರ ನಿಖಿಲ್ ಸೋಮಣ್ಣ ಹಾಗೂ ರೈತ ಸಂಘದ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0