Kodagu

ಮಗ್ಗುಲ ಗ್ರಾಮದ ಶನೀಶ್ವರ ದೇವಾಲಯದಲ್ಲಿ ಎರಡನೇ ಶ್ರಾವಣ ಶನಿವಾರದ ಪೂಜೆ ನೆರವೇರಿಕೆ

admincoorgdaily

ಮಗ್ಗುಲ ಗ್ರಾಮದ ಶನೀಶ್ವರ ದೇವಾಲಯದಲ್ಲಿ ಎರಡನೇ ಶ್ರಾವಣ ಶನಿವಾರದ ಪೂಜೆ ನೆರವೇರಿಕೆ

ವಿರಾಜಪೇಟೆ: ತಾಲೂಕಿನ ಮಗ್ಗುಲ ಗ್ರಾಮದ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ ವಿಶೇಷ ಪೂಜಾ ಮಹೋತ್ಸವದ ಎರಡನೇ ಶನಿವಾರದ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಗಳಿಂದ ನೆರವೇರಿದವು.

 ಶ್ರಾವಣ ಮಾಸದ ಪ್ರಯುಕ್ತ ದೇವಾಲಯದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮೂರನೇ ಶ್ರಾವಣ ಶನಿವಾರ ಆಗಸ್ಟ್ 29, ನಾಲ್ಕನೇ ಶ್ರಾವಣ ಶನಿವಾರ ಸೆಪ್ಟೆಂಬರ್ 05 ರಂದು ವಿಶೇಷ ಪೂಜೆಗಳು, ನವಗ್ರಹ ಪೂಜೆ, ಶನಿ ಶಾಂತಿ ಪೂಜೆ ಹಾಗೂ ಶನಿ ಜಪ ಮುಂತಾದ ವಿಶೇಷ ಪೂಜಾ ವಿಧಿವಿಧಾನಗಳು ಜರುಗಲಿವೆ. ಮಧ್ಯಾಹ್ನ 1 ಗಂಟೆಗೆ ನಾಡಿನ ಕ್ಷೇಮಕ್ಕಾಗಿ ಮಹಾಪೂಜೆ ನಡೆಯಲಿದೆ.

 ಪೂಜೆಯ ನಂತರ ಮಧ್ಯಾಹ್ನ 1:30 ಗಂಟೆಗೆ ಭಕ್ತಾದಿಗಳಿಗೆ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ.ಎರಡನೇ ಶ್ರಾವಣ ಶನಿವಾರದ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.

 ಮುಂದಿನ ಶನಿವಾರಗಳಂದು ನಡೆಯುವ ಈ ಪೂಜಾ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಶನೀಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಚೋಕಂಡ ರಮೇಶ್ ತಿಳಿಸಿದರು.