ಪೊನ್ನತ್ಮೊಟ್ಟೆಯಲ್ಲಿ ತರ್ಬಿಯತ್ ತುಲಬಾ ದರ್ಸ್ ಪ್ರಚಾರ ಸಮ್ಮೇಳನದ ಪೋಸ್ಟರ್ ಬಿಡುಗಡೆ

Dec 19, 2025 - 21:16
 0  260
ಪೊನ್ನತ್ಮೊಟ್ಟೆಯಲ್ಲಿ ತರ್ಬಿಯತ್ ತುಲಬಾ ದರ್ಸ್ ಪ್ರಚಾರ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಚೆಟ್ಟಳ್ಳಿ:ಶೈಖುನಾ ಅಲ್ ಹಾಜ್ ಮೊಯಿದು ಫೈಝಿ ಉಸ್ತಾದ್ ಅವರು ನೇತೃತ್ವದ ತರ್ಬಿಯತ್ ತುಲಬಾ ದರ್ಸ್ ಕುಂತೂರು ಇದರ 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ ಕಾರ್ಯಕ್ರಮವು ಚೆಟ್ಟಳ್ಳಿ ಸಮೀಪದ ಪೊನ್ನತ್ ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು S.Y.S ಯೂನಿಟ್ ಅಧ್ಯಕ್ಷರಾದ ಸತ್ತಾರ್ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಮಹಲ್ ಖತೀಬ್ ಶಾದುಲಿ ಸಖಾಫಿ ನೆರವೇರಿಸಿದರು. ದರ್ಸ್ ಮಹತ್ವದ ಬಗ್ಗೆ ನೌಷಾದ್ ಫೈಝಿ ಮುಖ್ಯ ಭಾಷಣ ಮಾಡಿದರು .

ಜನವರಿ 12,13ಕ್ಕೆ ನಡೆಯಲಿರುವ ಮಹಾ ಸಮ್ಮೇಳನಕ್ಕೆ ಎಲ್ಲರನ್ನೂ ಆಹ್ವಾನ ನೀಡಿ T.T.D S OLD STUDENTS ASSOCIATION ಪ್ರೆಸಿಡೆಂಟ್ ಸಹದ್ ಫೈಝಿ ಚೋಕಂಡಳ್ಳಿ ಸಮ್ಮೇಳನ ವಿಜಯಗೊಳಿಸಲು ಕರೆ ನೀಡಿದರು.

ಮಹಲ್ ಅಧ್ಯಕ್ಷ ಉಬೈದ್ ಉಸ್ತಾದ್ ಶುಭಹಾರೈಸಿದರು‌.ಇದೇ ಸಂದರ್ಭದಲ್ಲಿ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಮಜ್ಲಿಸ್ ನೂರ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಶೈಖುನಾ ಅಲ್ ಹಾಜ್ ಮೊಯಿದು ಫೈಝಿ ಉಸ್ತಾದ್ ದುವಾ ನೆರವೇರಿಸಿದರು.

 ಸಭೆಯಲ್ಲಿ OLD STUDENTS ASSOCIATION ಕಾರ್ಯದರ್ಶಿ ಸಮದ್ ಫೈಝಿ, ಮನಾಫ್ ಅಜ್ಹರಿ ರಷೀದ್ ದಾರಿಮಿ, ಯೂಸುಫ್ ಅಝಹರಿ ಫಯಾಜ್ , ಮುತ್ತಲಿಬ್, ರಫೀಕ್ ದಾರಿಮಿ. ಮುಸ್ತಾಕ್ ದಾರಿಮಿ, ಬಾದುಶ ಸಹದಿ ಇದ್ದರು. ಮುಸ್ತಫ ಅಜ್ಹರಿ ಸ್ವಾಗತಿಸಿ, ಸಮದ್ ಫೈಝಿ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1