ಏ.11 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ :-ಕುಶಾಲನಗರ ವಿದ್ಯುತ್ ವಿತರಣಾ 220/66 ಕೆ.ವಿ ಉಪ ಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ 33ಕೆ.ವಿ ಸೋಮವಾರಪೇಟೆ ಮಾರ್ಗದಲ್ಲಿ ಏಪ್ರಿಲ್, 11 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಗಲ್ ಕ್ಲಿಯರಿಂಗ್ ಹಾಗೂ ಫೀಡರ್ ನಿರ್ವಾಹಣೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಸೋಮವಾರಪೇಟೆ ಪಟ್ಟಣ, ಕರ್ಕಳ್ಳಿ, ಅಬ್ಬೂರುಕಟ್ಟೆ 11ಕೆವಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ, ಅಬ್ಬೂರುಕಟ್ಟೆ, ಎಲಕನೂರು, ಹೊಸಳ್ಳಿ, ಕರ್ಕಳ್ಳಿ, ನೇಗಳ್ಳಿ, ಮಸಗೋಡು, ತಣ್ಣೀರುಹಳ್ಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.