Kodagu

ಏ.05 ರಂದು ವಿದ್ಯುತ್ ವ್ಯತ್ಯಯ

admincoorgdaily

ಏ.05 ರಂದು ವಿದ್ಯುತ್ ವ್ಯತ್ಯಯ

ಮಡಿಕೇರಿ ಏ.04:-33/11 ಕೆ.ವಿ ಮೂರ್ನಾಡು ವಿದ್ಯುತ್ ವಿತರಣಾ ಉಪ ಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ ಎಫ್2 ನಾಪೋಕ್ಲು ಹಾಗೂ ಎಫ್3 ಮೂರ್ನಾಡು ಫೀಡರ್‍ನಲ್ಲಿ ಏಪ್ರಿಲ್, 05 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ನಾಪೋಕ್ಲು ಮಾರ್ಕೆಟ್, ನಾಪೋಕ್ಲು ಟೌನ್, ಬೇತು, ಗಾಂಧಿ ನಗರ, ಹಳೆತಾಲ್ಲೂಕು, ಭಗವತಿ ದೇವಸ್ಥಾನ ಹಾಗೂ ಮೂರ್ನಾಡು ಫೀಡರ್‍ಗೆ ಒಳಪಡುವ ಮೂರ್ನಾಡು ಟೌನ್, ಮುತ್ತಾರ್‍ಮುಡಿ, ಕುಂಬಳದಾಳು, ಕಿಗ್ಗಾಲು, ಕಬಡಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.