ಆ.22 ರಂದು ವಿದ್ಯುತ್ ವ್ಯತ್ಯಯ
ಮಡಿಕೇರಿ:-66/33/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್3 ಪಂಜರಪೇಟೆ ಮಾರ್ಗದಲ್ಲಿ ವಿದ್ಯುತ್ ಕೇಬಲ್ ದುರಸ್ತಿ ಕಾಮಗಾರಿ ನಡೆಸಬೇಕಿರುವುದರಿಂದ ಆಗಸ್ಟ್, 22 ರಂದು ಬೆಳಗ್ಗೆ 9.30 ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿರಾಜಪೇಟೆ ಪಟ್ಟಣ, ಕೆಎಸ್‍ಆರ್‍ಟಿಸಿ, ಶಾಂತಿನಗರ, ವಿದ್ಯಾನಗರ, ಸುಭಾಷ್‍ನಗರ, ಡಿ.ಸಿಲ್ವನಗರ, ನಿಸರ್ಗ ಬಡಾವಣೆ, ಮಂಜುನಾಥ ನಗರ, ವಿಜಯನಗರ, ಕಲ್ಲುಬಾಣೆ, ಪಂಜರಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
1
Sad
0
Wow
0
