ಡಿ.03 ರಂದು (ನಾಳೆ) ವಿದ್ಯುತ್ ವ್ಯತ್ಯಯ

Dec 2, 2025 - 17:03
 0  1.6k
ಡಿ.03 ರಂದು (ನಾಳೆ) ವಿದ್ಯುತ್ ವ್ಯತ್ಯಯ

ಮಡಿಕೇರಿ :-66/11 ಕೆ.ವಿ ಶನಿವಾರಸಂತೆ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್3-ಶನಿವಾರಸಂತೆ ಟೌನ್ ಫೀಡರ್‍ನಲ್ಲಿ ಡಿಸೆಂಬರ್, 03 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಸದರಿ ಫೀಡರ್‍ನಿಂದ ಹೊರಹೊಮ್ಮುವ ಶನಿವಾರಸಂತೆ ಪಟ್ಟಣ, ಗುಡುಗಳಲೆ, ಕೆ.ಆರ್.ಸಿ ಸರ್ಕಲ್, ಅಡ್ಡಶೆಟ್ಟಳ್ಳಿ, ಶೆಟ್ಟಿಗನಹಳ್ಳಿ, ಮಾದ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

What's Your Reaction?

Like Like 1
Dislike Dislike 1
Love Love 2
Funny Funny 1
Angry Angry 0
Sad Sad 1
Wow Wow 0