ಡಿ.20 ರಂದು ವಿದ್ಯುತ್ ವ್ಯತ್ಯಯ
ಮಡಿಕೇರಿ :-66/11 ಕೆ.ವಿ ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1-ನಲ್ಲೂರು, ಎಫ್2-ಬಾಳೆಲೆ, ಎಫ್4-ತಿತಿಮತಿ, ಎಫ್5-ಪಾಲಿಬೆಟ್ಟ, ಎಫ್6-ಬೇಗೂರು, ಎಫ್7-ಗೋಣಿಕೊಪ್ಪ, ಎಫ್8-ಪೊನ್ನಂಪೇಟೆ, ಎಫ್9-ಹಾತೂರು, ಎಫ್10-ಹೈಸೊಡ್ಲೂರು, ಫೀಡರ್‍ನಲ್ಲಿ ಡಿಸೆಂಬರ್, 20 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನೂತನ ಬ್ರೇಕರ್‍ಗಳ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಹಾತೂರು, ಅರುವತ್ತೋಕ್ಲು, ಕಿರುಗೂರು, ದೇವರಪುರ, ಮಾಯಮುಡಿ ಧನುಗಾಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.