ಜ.06 ರಂದು (ನಾಳೆ) ವಿದ್ಯುತ್ ವ್ಯತ್ಯಯ
ಮಡಿಕೇರಿ ಜ.05:-66/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ 33/11 ಕೆ.ವಿ ಸಿದ್ದಾಪುರ ವಿವಿ ಕೇಂದ್ರದಲ್ಲಿ ಜನವರಿ, 06 ರಂದು ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ 5ಎಂವಿಎ ಪರಿವರ್ತಕ ಅಳವಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ, ಸಿದ್ದಾಪುರ, ಕರಡಿಗೋಡು, ಅವರೆಗುಂದ, ಕೆಸವಿನಹಳ್ಳ, ಟೀಕ್‍ವುಡ್, ಆರೆಂಜ್‍ಕೌಂಟಿ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
1
Wow
0
