ಜು.30 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ ಜು.29:-ವಿರಾಜಪೇಟೆ 66/33/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್3 ಪಂಜರಪೇಟೆ ಮಾರ್ಗದಲ್ಲಿ ಜುಲೈ, 30 ರಂದು ಬೆಳಗ್ಗೆ 9 ರಿಂದ 5 ಗಂಟೆಯವರೆಗೆ ವಿದ್ಯುತ್ ಕೇಬಲ್ ದುರಸ್ತಿ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿರಾಜಪೇಟೆ ಪಟ್ಟಣ, ಮಗ್ಗುಲ, ಸುಂಕದಕಟ್ಟೆ, ಮೊಗರಗಲ್ಲು, ನೆಹರೂನಗರ, ಕೆಎಸ್‍ಆರ್‍ಟಿಸಿ, ಶಾಂತಿನಗರ, ವಿದ್ಯಾನಗರ, ಸುಭಾಷ್‍ನಗರ, ನಿಸರ್ಗ ಬಡಾವಣೆ, ಮಂಜುನಾಥ ನಗರ, ವಿಜಯನಗರ, ಕಲ್ಲುಬಾಣೆ, ಪಂಜರಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.