Kodagu

ಜೂ.12 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

admincoorgdaily

ಜೂ.12 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಮಡಿಕೇರಿ ಜೂ.11:-ಪೊನ್ನಂಪೇಟೆ 66/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್7-ಅರವತೋಕ್ಲು, ಎಫ್8-ಗೋಣಿಕೊಪ್ಪ, ಎಫ್9-ಹಾತೂರು, ಎಫ್12-ಪಾಲಿಬೆಟ್ಟ, ಎಫ್13 ಹೊಸೂರು, ಎಫ್18-ತಿತಿಮತಿ, ಫೀಡರ್‍ನಲ್ಲಿ ಜಂಗಲ್ ಕಟ್ಟಿಂಗ್ ಹಾಗೂ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಜೂನ್, 12 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಅರವತೋಕ್ಲು, ಗೋಣಿಕೊಪ್ಪ, ಹಾತೂರು, ಪಾಲಿಬೆಟ್ಟ, ಹೊಸೂರು, ತಿತಿಮತಿ, ಶಾಂತಿನಗರ, ಗಣಪತಿ ನಗರ, ಜೋಡುಬೀಟಿ, ಪಿಹೆಚ್‍ಎಸ್ ಕಾಲೋನಿ, ಹರಿಶ್ಚಂದ್ರಪುರ, ಕೈಕೇರಿ, ಈರಣ್ಣ ಕಾಲೋನಿ, ಗದ್ದೆಮನೆ, ಬೆಟ್ಟಗೇರಿ, ಚೆನ್ನಂಗೋಲಿ, ಅತ್ತೂರು, ಹುಂಡಿ, ಚೆನ್ನಯ್ಯನಕೋಟೆ, ಅಬ್ಬೂರು, ಹಂಚಿಕಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.