ಜೂ.08 ರಂದು ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ ಜೂ.06:-ಪೊನ್ನಂಪೇಟೆ 66/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್12-ಪಾಲಿಬೆಟ್ಟ, ಎಪ್13- ಹೊಸೂರು, ಫೀಡರ್‍ನಲ್ಲಿ ಜೂನ್, 08 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಾಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹೊಸೂರು, ಜಾಗರಿ, ಗದ್ದೆಮನೆ, ಬೆಟ್ಟಗೇರಿ, ಲೋಪಮುದ್ರ ಆಸ್ಪತ್ರೆ ವ್ಯಾಪ್ತಿ, ಅತ್ತೂರು, ಪಾಲಿಬೆಟ್ಟ, ಹುಂಡಿ, ಚೆನ್ನಯ್ಯನಕೋಟೆ, ಅಬ್ಬೂರು, ಅಂಚಿಕಾಡು, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.